ಸಣ್ಣ-ಮಧ್ಯಮ ರೈತರಿಂದ ಲಾಭದಾಯಕ ಕೃಷಿ: ಶೋಭಾ

ಶನಿವಾರ, 21 ಆಗಸ್ಟ್ 2021 (13:15 IST)
ಬೆಂಗಳೂರು: ಸಣ್ಣ ಮತ್ತು ಮಧ್ಯಮ ರೈತರನ್ನು ಒಗ್ಗೂಡಿಸಿ ಕೃಷಿ ಕ್ಷೇತ್ರವನ್ನು ಲಾಭದಾಯಕ ಕ್ಷೇತ್ರವಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಶೇ 70ರಷ್ಟು ಜನ ಕೃಷಿಕರು. ಇವರಲ್ಲಿ ಶೇ 80ರಷ್ಟು ಕೃಷಿಕರು ಸಣ್ಣ, ಮಧ್ಯಮ ಹಿಡುವಳಿದಾರರು. ಇವರು ಲಾಭದಾಯಕವಲ್ಲ ಎಂದು ಕೃಷಿ ಮಾಡುತ್ತಿಲ್ಲ. ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇವರನ್ನು ಒಗ್ಗೂಡಿಸಿ ಕೃಷಿಯನ್ನು ಲಾಭದಾಯಕಗೊಳಿಸುವುದು ಉದ್ದೇಶ' ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಅಕ್ಕಿ, ಗೋಧಿ ಗಾಗಿ ಬೇರೆ ದೇಶಗಳತ್ತ ನೋಡುತ್ತಿದ್ದ ದೇಶ ಈಗ ಆಹಾರ ಉತ್ಪಾದನೆ ಯಲ್ಲಿ ಸ್ವಾವಲಂಬಿ ಆಗಿದೆ. ಇದು ಪ್ರಧಾನಿ ಯವರ ದೂರದೃಷ್ಟಿಯ ಯೋಜನೆಗಳ ಫಲ. ಈ ಬಾರಿ 3.05 ಕೋಟಿ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮತ್ತು 3.26 ಕೋಟಿ ಮೆಟ್ರಿಕ್ ಟನ್ ತೋಟಗಾರಿಕೆ ಬೆಳೆ ಉತ್ಪಾದನೆ ಆಗಿದೆ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ