ತಮಿಳುನಾಡು: ವಿಲ್ಲುಪುರಂನಲ್ಲಿ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವ ಪೊನ್ಮುಡಿ ಮೇಲೆ ಕೆಸರೆರಚಿ ಕಲ್ಲು ತೂರಿ ಆಕ್ರೋಶ ಹೊರಹಾಕಿದ್ದಾರೆ.
ಪ್ರವಾಹ ಪರಿಸ್ಥಿತಿಗೆ ಸರ್ಕಾರ ಸ್ಪಂದಿಸದೇ ಹತಾಶರಾಗಿದ್ದ ಪ್ರತಿಭಟನಕಾರರು ಸಚಿವರು ಕಾರಿನಿಂದ ಇಳಿಯುತ್ತಿದ್ದ ಸಚಿವರು, ಅವರ ಪುತ್ರ ಹಾಗೂ ಜಿಲ್ಲಾಧಿಕಾರಿ ಅವರು ಬರುತ್ತಿದ್ದ ಹಾಗೇ ಅವರ ಮೇಲೆ ಕೆಸರು ಎರಚಿದ್ದು, ಭಾರೀ ಗದ್ದಲಕ್ಕೆ ಕಾರಣವಾಗಿದೆ.
ತಮಿಳುನಾಡಿನ ವಿಲುಪುರಂ ಜಿಲ್ಲೆಯ ಇರುವೇಲ್ಪಟ್ಟು ಪ್ರದೇಶದಲ್ಲಿ ತಿರುಚಿರಾಪಳ್ಳಿ-ಚೆನ್ನೈ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಈ ವೇಳೆ ಅರಣ್ಯ ಸಚಿವ ಪೊನ್ಮುಡಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಸಚಿವ ಪೊನ್ಮುಡಿ ಅವರು ಮೈದಾನದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮ ವಾಹನದೊಳಗಿಂದ ಮಾತನಾಡಿದರು ಎಂದು ಆರೋಪಿಸಿ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅರಣ್ಯ ಸಚಿವ ಪೊನ್ಮುಡಿ, ಅವರ ಪುತ್ರ ಗೌತಮ ಸಿಕಾಮಣಿ ಮತ್ತು ಜಿಲ್ಲಾಧಿಕಾರಿ ಪಳನಿ ಇರುವೆಲ್ಪಟ್ಟು ಪ್ರವಾಹ ತಪಾಸಣೆ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದರು. ಅತಿವೃಷ್ಟಿ ಸಮಸ್ಯೆಗೆ ಸರ್ಕಾರ ಸ್ಪಂದಿಸಿದ್ದರಿಂದ ಹತಾಶರಾದ ಸಾರ್ವಜನಿಕರು ಸಚಿವರು, ಅವರ ಪುತ್ರ ಹಾಗೂ ಜಿಲ್ಲಾಧಿಕಾರಿ ಮೇಲೆ ಕೆಸರು ಎರಚಿ ಭಾರಿ ಗಲಾಟೆ ನಡೆಸಿದರು