ಚಂಡಮಾರುತಕ್ಕೆ ಮೂವರು ಬಲಿ: ಮನೆಗಳಿಗೆ ನುಗ್ಗಿದ ನೀರು, 100ಕ್ಕೂ ಹೆಚ್ಚು ಮಂದಿ ರಕ್ಷಣೆ
ಮಳೆಯ ಅವಾಂತರದಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪುದುಚೇರಿಯ ಕೃಷ್ಣನಗರದ ಕೆಲವು ಪ್ರದೇಶಗಳಲ್ಲಿ 5 ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದ್ದು, ಸುಮಾರು 500 ಮನೆಗಳು ಜಲಾವೃತವಾಗಿವೆ. ಇದರಿಂದ ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಭಾರತೀಯ ಸೇನೆ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈವರೆಗೆ ಭಾರತೀಯ ಸೇನೆ 100ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಿದೆ ಎಂದು ವರದಿ ಹೇಳಿದೆ.