ಉಗ್ರರಿಗೆ ಶಿಕ್ಷೆ ಕೊಡಿ, ನಮಗ್ಯಾಕೆ: ಭಾರತ ಬಿಟ್ಟು ಹೋಗಲು ಗೋಳಾಡಿದ ಪಾಕಿಸ್ತಾನಿಗಳು

Sampriya

ಮಂಗಳವಾರ, 29 ಏಪ್ರಿಲ್ 2025 (17:55 IST)
Photo Credit X
ಜಮ್ಮು ಕಾಶ್ಮೀರ: ಪಂಜಾಬ್‌ನ ವಾಘಾ-ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ಏಪ್ರಿಲ್ 27ಕ್ಕೆ ಗಡುವು ನೀಡಲಾಗಿದೆ.  

ಇದೀಗ ತಮ್ಮವರನ್ನು ಬಿಟ್ಟುಹೋಗಲು ಪಾಕಿಸ್ತಾನಿಗಳು ಗೋಳಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಕ್ರಾಸ್‌ಫೈರ್‌ನಲ್ಲಿ ಸಿಕ್ಕಿಬಿದ್ದವರಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಎಂಟು ವರ್ಷದ ಮಗನನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಮತ್ತೊಬ್ಬಳು ಗರ್ಭಿಣಿಯಾಗಿದ್ದು, ಆಕೆ ಕೂಡಾ 6 ತಿಂಗಳ ಹಿಂದೆ ಪಾಕಿಸ್ತಾನಿಯನ್ನು ಮದುವೆಯಾದಳು.

ಇತ್ತೀಚಿನ ಮಾಹಿತಿಯ ಪ್ರಕಾರ, 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿಗಳ ಭಾರತದ ವೀಸಾವನ್ನು ರದ್ದುಗೊಳಿಸಿದೆ.

ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವಾಪಸ್ ಕಳುಹಿಸುವಂತೆ  ಖಚಿತಪಡಿಸಿಕೊಳ್ಳಲು ಗೃಹ ಸಚಿವಾಲಯ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಸೂಚನೆ ನೀಡಿದೆ.

‌ಅವರಲ್ಲಿ ಕರಾಚಿಯ ನಿವಾಸಿ ಇರಾಮ್, ಮದುವೆಯಾಗಿ 10 ವರ್ಷಗಳಾಗಿದ್ದು, ಭಾರತೀಯ ಪತಿಯೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು. ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಇದೀಗ ಪೊಲೀಸರು ಆಕೆಯಲ್ಲಿ ಭಾರತ ತೊರೆಯುವಂತೆ ಹೇಳಿದ್ದಾರೆ.

ಕುಟುಂಬಗಳು ಧ್ವಂಸಗೊಂಡಿವೆ. ಇದು ಮೂಲಭೂತ ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ನಮ್ಮನ್ನು ಬಲವಂತವಾಗಿ ಭಾರತದಿಂದ ಹೊರಹಾಕಲಾಗುತ್ತಿದೆ. ನನ್ನ ಪತಿ ಮತ್ತು ನನ್ನ ಮಗ ಇಲ್ಲದೆ ನಾನು ಪಾಕಿಸ್ತಾನದಲ್ಲಿ ಹೇಗೆ ಬದುಕುತ್ತೇನೆ ಎಂದು ನನಗೆ ಊಹಿಸಲು ಸಾಧ್ಯವಿಲ್ಲ ಎಂದು ಇರಾಮ್ ಇಂಡಿಯಾ ಟುಡೇಗೆ ತಿಳಿಸಿದರು.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತನ್ನ ದೀರ್ಘಾವಧಿಯ ವೀಸಾ (ಎಲ್‌ಟಿವಿ) ಅರ್ಜಿಯನ್ನು ರದ್ದುಗೊಳಿಸಲಾಗಿದೆ ಮತ್ತು ಅವಳ ಪಾಸ್‌ಪೋರ್ಟ್ ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ ಎಂದು ಇರಾಮ್ ವಿಷಾದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ