Pahalgam Attack, ಪಾಕ್‌ ಜತೆಗಿನ ಎಲ್ಲ ಕ್ರಿಕೆಟ್ ಸಂಬಂಧ ಮುರಿಯಬೇಕು: ಮಾಜಿ ಕ್ರಿಕೆಟಿಗ ಸೌರವ್ ಗಂಗೋಲಿ ಒತ್ತಾಯ

Sampriya

ಶನಿವಾರ, 26 ಏಪ್ರಿಲ್ 2025 (17:58 IST)
Photo Credit X
ಬೆಂಗಳೂರು: ಕಾಶ್ಮೀರ ಕಣಿವೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಸಂಬಂಧ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪ್ರತಿಕ್ರಿಯಿಸಿ, ಭಾರತವು ಪಾಕಿಸ್ತಾನದೊಂದಿಗಿನ ತನ್ನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಮುರಿಯುವ ಮೂಲಕ ತಿರುಗೇಟು ನೀಡಬೇಕೆಂದು ಹೇಳಿದರು.

ಅದಲ್ಲದೆ ಐಸಿಸಿ ಮತ್ತು ಏಷ್ಯನ್ ಪಂದ್ಯಾವಳಿಗಳಲ್ಲಿ ಕೂಡ ಪಾಕ್‌ ಜತೆ ಪಂದ್ಯಾಟವನ್ನು ಎದುರಿಸಬಾರದು ಎಂದರು.

ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ, ಪ್ರತಿ ವರ್ಷವೂ ಭಾರತದ ನೆಲದಲ್ಲಿ ಕೆಲವು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು ಎಂದು ಹೇಳಿದರು.

ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುರಿದು ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಪ್ರತಿ ವರ್ಷವೂ ಪಾಕ್‌ನ ಉಗ್ರರು ನಡೆಸುತ್ತಿರುವ ದಾಳಿ ತಮಾಷೆಯಾಗಿ ಬಿಟ್ಟಿದೆ. ಇನ್ಮುಂದೆ ಭಯೋತ್ಪಾದನೆಯನ್ನು ಸಾಯಿಸಲು ಸಾಧ್ಯವಿಲ್ಲ ಎಂದರು.

ಏಪ್ರಿಲ್ 22 ರಂದು ಭಾರತದ ನೆಲದಲ್ಲಿ ಮತ್ತೊಮ್ಮೆ ಭಯೋತ್ಪಾದನೆ ಸಂಭವಿಸಿತು, ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು ಮತ್ತು ಅನೇಕರು ಗಾಯಗೊಂಡರು. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಭಯೋತ್ಪಾದಕ ಗುಂಪು ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ