ಪ್ರಧಾನಿ ಮೋದಿ ಮೇಲೆ ಕಾಂಗ್ರೆಸ್ ಗೆ ರಾಫೆಲ್ ಕಳಂಕ ಮೆತ್ತಲು ಸಾಧ್ಯವಾಗದು!

ಶುಕ್ರವಾರ, 28 ಸೆಪ್ಟಂಬರ್ 2018 (08:53 IST)
ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ  ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿ ಅವ್ಯವಹಾರವಾಗಿದೆಯೆಂದು ಆರೋಪ ಹೊರಿಸಿ ಜನರ ಕಣ್ಣಲ್ಲಿ ಅವರನ್ನು ಖಳನಾಯಕರಂತೆ ಬಿಂಬಿಸಲು ಸಾಧ್ಯವಾಗದು ಎಂದು ಮಾಜಿ ಕೇಂದ್ರ ಸಚಿವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಅಂಗ ಪಕ್ಷವಾಗಿರುವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ರಾಫೆಲ್ ಡೀಲ್ ನಲ್ಲಿ ಪ್ರಧಾನಿ ಮೋದಿಯವರನ್ನು ಕಳಂಕಿತ ಎಂದು ಜನರ ಕಣ್ಣಿಗೆ ಕಾಂಗ್ರೆಸ್ ಗೆ ಬಿಂಬಿಸಲು ಸಾಧ್ಯವಾಗದು. ಜನರು ಪ್ರಧಾನಿ ಮೋದಿಯನ್ನು ತಪ್ಪಿತಸ್ಥನಂತೆ ಕಾಣುವುದಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ರಫೇಲ್ ಡೀಲ್ ಬಗ್ಗೆ ನೀಡಿದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಯಿತು. ಅದನ್ನೀಗ ವಿತ್ತ ಸಚಿವ ಅರುಣ್ ಜೇಟ್ಲಿ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದರ ಮಧ್ಯೆ ಈ ಡೀಲ್ ನಿಂದ ಪ್ರಧಾನಿ ಮೋದಿ ಲಾಭ ಮಾಡಿಕೊಂಡರು ಎಂದರೆ ಜನರು ಒಪ್ಪಿಕೊಳ್ಳುವ ಸಂಭವ ಕಡಿಮೆ ಎಂದು ಶರದ್ ಪವಾರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ