ಬಿಜೆಪಿ, ಆರ್ ಎಸ್ಎಸ್ ಮೇಲೆ ರಾಹುಲ್ ಗಾಂಧಿ ಹೊಸ ಆರೋಪ

ಬುಧವಾರ, 21 ಮಾರ್ಚ್ 2018 (09:09 IST)
ನವದೆಹಲಿ: ಬಿಜೆಪಿ ಮತ್ತು ಆರ್ ಎಸ್ಎಸ್ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಆರೋಪ ಮಾಡಿದ್ದು, ದೇಶದಲ್ಲಿ ಐತಿಹಾಸಿಕ ವ್ಯಕ್ತಿಗಳ ಮೂರ್ತಿ ಕೆಡವಲು ಪ್ರೇರಣೆ ಕೊಟ್ಟಿದ್ದಾರೆಂದು ದೂರಿದ್ದಾರೆ.

ತ್ರಿಪುರಾದಲ್ಲಿ ಚುನಾವಣೆ ಗೆಲುವಿನ ಬಳಿಕ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಕೆಡವಲಾಯಿತು. ಅದಾದ ಬಳಿಕ ದೇಶದ ಹಲವೆಡೆ ಪ್ರಮುಖ ಐತಿಹಾಸಿಕ ನಾಯಕರ ಮೂರ್ತಿ ಕೆಡವುವ ಕೆಟ್ಟ ಚಾಳಿ ಆರಂಭವಾಯಿತು.

ಇದೆಲ್ಲಾ ಬಿಜೆಪಿ ಮತ್ತು ಆರ್ ಎಸ್ಎಸ್ ಸಂಘಟನೆಯ ಕುಮ್ಮಕ್ಕಿನಿಂದ ನಡೆಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ತಮ್ಮನ್ನು ವಿರೋಧಿಸುವವರ ಮೂರ್ತಿ ಕೆಡವಲು ಬಿಜೆಪಿಯೇ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿತ್ತು ಎಂದು ರಾಹುಲ್ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ