ಹನುಮಾನ್‌ ಮಂದಿರಕ್ಕೆ ಭೇಟಿಯ ಮೂಲಕ ರಾಹುಲ್‌ಗಾಂಧಿ ಪ್ರವಾಸ ಆರಂಭ

ಸೋಮವಾರ, 15 ಜನವರಿ 2018 (19:39 IST)
ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಯ್‌ಬರೇಲಿ ಪ್ರವಾಸ ಹಮ್ಮಿಕೊಂಡಿದ್ದು, ಹನುಮಾನ್‌ ಮಂದಿರಕ್ಕೆ ಭೇಟಿ ನೀಡುವ ಮೂಲಕ ಪ್ರವಾಸ ಆರಂಭಿಸಿದ್ದಾರೆ.
 
ಉತ್ತರ ಪ್ರದೇಶದ ಲಕ್ನೋದಿಂದ ಅಮೇಥಿ ಮಾರ್ಗವಾಗಿ ಹೊರಟ ಅವರು ಲಕ್ನೋ– ರಾಯ್‌ಬರೇಲಿ ಹೆದ್ದಾರಿಯಲ್ಲಿನ ಹನುಮಾನ್‌ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದಲ್ಲಿ 10 ನಿಮಿಷಗಳ ಉಳಿದಿದ್ದರು.

ರಾಹುಲ್‌ ಗಾಂಧಿ ಅವರು ಹಿಂದೂ ದೇವಾಲಯಗಳ ಭೇಟಿ ಮುಂದುವರೆದಿದ್ದು, ಬಿಜೆಪಿ ಹಿಂದುತ್ವದ ವಿರುದ್ಧದ ದಾಳ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ