Waqf Bill: ನಾಳೆ ಸಂಸತ್ತಿನಲ್ಲಿ ವಕ್ಫ್ ಬಿಲ್ ಮಂಡನೆ: ಇಂದು ರಾಹುಲ್ ಗಾಂಧಿ ತುರ್ತು ಮೀಟಿಂಗ್
ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ವಕ್ಫ್ ಬಿಲ್ ಮಂಡನೆ ಮಾಡಲಿದೆ. ಈ ಬಿಲ್ ಮಂಡನೆ ಮಾಡದಂತೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಒತ್ತಾಯಿಸುತ್ತಲೇ ಬಂದಿದ್ದಾರೆ.
ಆದರೆ ಇದರ ನಡುವೆಯೂ ಮೋದಿ ಸರ್ಕಾರ ಜೆಪಿಸಿ ಕಮಿಟಿ ಮಾಡಿ ಅದರ ವರದಿ ಆಧರಿಸಿ ಬಿಲ್ ಮಂಡನೆಗೆ ಸಿದ್ಧವಾಗಿದೆ. ಇದರ ವಿರುದ್ಧ ದೇಶದಾದ್ಯಂತ ಈಗಾಗಲೇ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ರಂಜಾನ್ ಆಚರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಇದೀಗ ಸಂಸತ್ ನಲ್ಲಿ ಬಿಲ್ ಮಂಡನೆ ವೇಳೆ ತಮ್ಮ ನಿಲುವು ಏನಿರಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರ ನಿಲುವು ಹೇಗಿರಬೇಕು ಎಂದು ಚರ್ಚೆಯಾಗಲಿದೆ.