ನವದೆಹಲಿ: ಮೆರಿಟ್ ಆಧಾರದಲ್ಲಿ ಶಿಕ್ಷಣ, ಉದ್ಯೋಗ ಸಿಗಬಾರದು. ಇಂತಹ ವ್ಯವಸ್ಥೆಯೇ ತಪ್ಪು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು. ಅವರ ಹೇಳಿಕೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.
ಸಂದರ್ಶನವೊಂದರಲ್ಲಿ ರಾಹುಲ್ ಇಂತಹ ಹೇಳಿಕೆ ನೀಡಿದ್ದರು. ದಲಿತರು, ಹಿಂದುಳಿದವರು, ಆದಿವಾಸಿಗಳು ನ್ಯಾಯೋಚಿತವಾಗಿ ನಮ್ಮ ಶಿಕ್ಷಣ ಮತ್ತು ಸರ್ಕಾರೀ ನೌಕರಿಯನ್ನು ಪ್ರವೇಶಿಸುವ ವ್ಯವಸ್ಥೆಯಿದೆ ಎನ್ನುವುದು ತಪ್ಪು ಕಲ್ಪನೆ. ಮೆರಿಟ್ ಆಧಾರಿತ ವ್ಯವಸ್ಥೆ ಸಂಪೂರ್ಣವಾಗಿ ಮೇಲ್ವರ್ಗದವರ ಪರವಾಗಿ ಇದೆ ಎಂದಿದ್ದರು.
ಸಮಾಜದಲ್ಲಿ ಅಸಮಾನತೆ ತೊಡೆದು ಹಾಕಲು ಜಾತಿ ಗಣತಿ ಅಗತ್ಯ. ಇದನ್ನು ವಿರೋಧಿಸುವವರು ಸತ್ಯ ಮುಚ್ಚಿಡಲು ಬಯಸುವವರು ಎಂದು ಟೀಕಿಸಿದ್ದರು. ಅವರ ಹೇಳಿಕೆಗೆ ಬಿಜೆಪಿ ಭಾರೀ ಟೀಕೆ ಮಾಡಿತ್ತು. ರಾಹುಲ್ ತಮ್ಮ ಹೇಳಿಕೆಯಿಂದ ಅರ್ಹತೆ ಆಧಾರದಲ್ಲಿ ಜೀವನದಲ್ಲಿ ಮುಂದೆ ಬಂದ ಲಕ್ಷಾಂತರ ಮಂದಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಇನ್ನು ಈ ಬಗ್ಗೆ ನೆಟ್ಟಿಗರೂ ಕಾಮೆಂಟ್ ಮಾಡಿದ್ದು, ಇಂತಹ ವ್ಯಕ್ತಿಯನ್ನು ಪ್ರಧಾನಿಯಾಗಿ ಮಾಡಿದರೆ ನಮ್ಮ ದೇಶದ ವ್ಯವಸ್ಥೆ ಏನಾದೀತು? ಇವರ ಮನಸ್ಥಿತಿ ಹೇಗಿದೆ ಎಂಬುದು ಇದನ್ನು ತೋರಿಸುತ್ತದೆ. ಹಾಗಿದ್ದರೆ ಮೆರಿಟ್ ಸೀಟ್ ಪಡೆದ ಮೇಲ್ವರ್ಗದ ಜಾತಿ, ಪಂಗಡದವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.