ಉಗ್ರ ಮಸೂದ್ ಅಜರ್ ನನ್ನು ‘ಅಜರ್ ಜೀ’ ಎಂದ ರಾಹುಲ್ ಗಾಂಧಿ

ಮಂಗಳವಾರ, 12 ಮಾರ್ಚ್ 2019 (09:49 IST)
ನವದೆಹಲಿ: ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ಸದಾ ವಿಧ್ವಂಸಕ ಕೃತ್ಯ ನಡೆಸುವ ಜೈಶೆ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಜರ್ ಜೀ ಎಂದು ಕರೆದು ವಿವಾದಕ್ಕೀಡಾಗಿದ್ದಾರೆ.


ಕಾಂಗ್ರೆಸ್ ಸಮಾವೇಶವೊಂದರಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ ’56 ಇಂಚಿನ ಈ ಜನರೇ ಹಿಂದೆ ಆಡಳಿತ ನಡೆಸುತ್ತಿದ್ದಾಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಸೂದ್ ಅಜರ್ ಜೀ ಜತೆಗೆ ತೆರಳಿ ಕಂದಹಾರ್ ನಲ್ಲಿ ಹಸ್ತಾಂತರಿಸಿ ಬಂದಿದ್ದರು’ ಎಂದು ರಾಹುಲ್ ಎಡವಟ್ಟು ಮಾಡಿಕೊಂಡಿದ್ದಾರೆ.

ಉಗ್ರನನ್ನು ಗೌರವಯುತವಾಗಿ ಸಂಬೋಧಿಸಿದ್ದಕ್ಕೆ ಇದೀಗ ರಾಹುಲ್ ಬಿಜೆಪಿ ಸೇರಿದಂತೆ ಇತರರಿಂದ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪಾಕಿಸ್ತಾನಕ್ಕೂ ರಾಹುಲ್ ಗಾಂಧಿಗೂ ಏನು ವ್ಯತ್ಯಾಸವಿದೆ? ಇಬ್ಬರೂ ಉಗ್ರರನ್ನು ಪ್ರೀತಿಸುತ್ತಾರೆ ಎಂದಿದ್ದಾರೆ. ವಿವಾದದ ಬಳಿಕ ಕಾಂಗ್ರೆಸ್, ರಾಹುಲ್ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಿಪ್ಪೆ ಸಾರುವ ಕೆಲಸ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ