ರಫೇಲ್ ಅವ್ಯವಹಾರ ಬಗ್ಗೆ ಪ್ರಧಾನಿ ಮೋದಿ ಸ್ವತಃ ತಮ್ಮ ವಿರುದ್ಧ ತನಿಖೆ ಮಾಡಿಸಲಿ- ರಾಹುಲ್ ಗಾಂಧಿ
ಗುರುವಾರ, 7 ಮಾರ್ಚ್ 2019 (13:12 IST)
ನವದೆಹಲಿ : ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಎನ್.ಡಿ.ಎ.ಸರ್ಕಾರಕ್ಕೆ ಈಗ ರಫೇಲ್ ಒಪ್ಪಂದದ ದಾಖಲೆ ಕಳೆದುಹೋಗಿವೆ ಎಂಬ ಹೊಸ ಸಾಲು ಸಿಕ್ಕಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ರಫೇಲ್ ದಾಖಲೆ ಕಳೆದುಹೋಗಿದ್ದರೆ ನಮ್ಮ ಆರೋಪ ಸತ್ಯ. ಹಣ ಎಲ್ಲಿ ಹೋಯಿತೆಂಬ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ಅನಿಲ್ ಅಂಬಾನಿಗೆ ಹಣ ನೀಡುವುದಕ್ಕಾಗಿ ರಫೇಲ್ ಒಪ್ಪಂದವನ್ನು ಪ್ರಧಾನಿ ಮೋದಿ ವಿಳಂಬ ಮಾಡ್ತಿದ್ದಾರೆ. ಅನಿಲ್ ಅಂಬಾನಿಗೆ ಮೋದಿ 30 ಸಾವಿರ ಕೋಟಿ ರೂ. ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ರಫೇಲ್ ಡೀಲ್ ದಾಖಲೆಯನ್ನು ಮೋದಿ ಪಾತ್ರ ಸ್ಪಷ್ಟವಾಗಿದೆ. ರಫೇಲ್ ಒಪ್ಪಂದದಲ್ಲಿ ಮೋದಿ ಬೈಪಾಸ್ ಸರ್ಜರಿ ಮಾಡಿದ್ದಾರೆ. ಈ ಬಗ್ಗೆ ರಫೇಲ್ ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಪ್ರಧಾನಿ ಮೋದಿಯನ್ನು ರಕ್ಷಿಸಲು ಎಲ್ಲ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದಾರೆ. ರಫೇಲ್ ಒಪ್ಪಂದದಲ್ಲಿ ಪಿಎಂಒ ಹಸ್ತಕ್ಷೇಪ ಮಾಡಿದ್ದು ಏಕೆ? ದಾಖಲೆಯಲ್ಲಿ ಯಾರ ಹೆಸರಿದೆಯೋ ಅವರ ತನಿಖೆಯಾಗಲಿ. ಪ್ರಧಾನಿ, ಪ್ರಧಾನಿ ಕಾರ್ಯಾಲಯದ ವಿರುದ್ಧ ತನಿಖೆಯಾಗಲಿ. ಪ್ರಧಾನಿ ಮೋದಿ ಸತಃ ತಮ್ಮ ವಿರುದ್ಧ ತನಿಖೆ ಮಾಡಿಸಲಿ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.