ರಾಹುಲ್ ಗಾಂಧಿಗೆ ನೊಬೆಲ್ ಕೊಡಬೇಕಿತ್ತು: ಕಾಂಗ್ರೆಸ್ ನಾಯಕ ಅಸಮಾಧಾನ

Krishnaveni K

ಶನಿವಾರ, 11 ಅಕ್ಟೋಬರ್ 2025 (15:00 IST)
ನವದೆಹಲಿ: ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ ಮಚೋದಾಗೆ ನೊಬೆಲ್ ಪ್ರಶಸ್ತಿ ನೀಡಿರುವುದಕ್ಕೆ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ಅಸಮಾಧಾನ  ವ್ಯಕ್ತಪಡಿಸಿದ್ದು ರಾಹುಲ್ ಗಾಂಧಿಗೆ ನೀಡಬೇಕಿತ್ತು ಎಂದಿದ್ದಾರೆ.

ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿ ಮಾಡುತ್ತಿರುವ ಹೋರಾಟ ದೊಡ್ಡದು. ಭಾರತದಲ್ಲಿ ಸಂವಿಧಾನವನ್ನು ಉಳಿಸಲು ಹೋರಾಡಿದ್ದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕಿತ್ತು ಎಂದು ಸುರೇಂದ್ರ ರಜಪೂತ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಟ್ರೋಲ್ ಆಗುತ್ತಿದೆ.

ರಾಹುಲ್ ಗಾಂಧಿ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಅವರು ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ ವಚೋದಾಗೆ ನೀಡಲಾಗಿದೆ. ಭಾರತದಲ್ಲಿ ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಹೋರಾಟ ದೊಡ್ಡದು ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಹಾಗಿದ್ದರೆ ನೊಬೆಲ್ ಪ್ರೈಸ್ ಮೊದಲು ಜಯಪ್ರಕಾಶ್ ನಾರಾಯಣ್ ಅವರಿಗೆ ಕೊಡಬೇಕಿತ್ತು ಎಂದಿದ್ದಾರೆ. ಹಿಂದೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಅಮಾನತಿನಲ್ಲಿಟ್ಟಾಗ ಹೋರಾಟ ಮಾಡಿದ್ದವರು ಜಯಪ್ರಕಾಶ್ ನಾರಾಯಣ್. ಇನ್ನು ಕೆಲವರು ಇದೊಂದು ಕಡಿಮೆಯಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ