ರಾಹುಲ್ ಗಾಂಧಿ ಎಂದರೆ ನೆಹರೂ ಹಾಗೆ ಸ್ಟ್ರಾಂಗ್ ಮ್ಯಾನ್ ಅಂತೆ!

ಶನಿವಾರ, 1 ಜೂನ್ 2019 (10:32 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ  ನೀಡಲು ಪಟ್ಟು ಹಿಡಿದಿರುವ ಬೆನ್ನಲ್ಲೇ ಅವರ ಬೆಂಬಲಿಗರು ರಾಜೀನಾಮೆ ನೀಡದಂತೆ ಒತ್ತಾಯಿಸುತ್ತಿದ್ದಾರೆ.


ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ತನ್ನ ಮುಖವಾಣಿಯಲ್ಲಿ ರಾಹುಲ್ ಗಾಂಧಿ ಬಗ್ಗೆ ಹೊಗಳಿ ಬರೆದಿದ್ದು, ನೆಹರೂ ಅವರಂತೇ ರಾಹುಲ್ ಕೂಡಾ ಕಾಂಗ್ರೆಸ್ ಪಕ್ಷವನ್ನು ಕಟ್ಟಬಲ್ಲ ಸಮರ್ಥ ಆಧಾರಸ್ತಂಬ ಎಂದು ಬಣ್ಣಿಸಿದೆ.

ಕಾಂಗ್ರೆಸ್ ನಂತಹ ವಿಶಾಲ ಮನೋಭಾವದ ಪಕ್ಷಕ್ಕೆ ರಾಹುಲ್ ರಂತಹ ವಿಶಾಲ ಹೃದಯಿ ನಾಯಕರು ಬೇಕು ಎಂದು ಡಿಎಂಕೆ ಅಭಿಪ್ರಾಯಪಟ್ಟಿದೆ. ಈ ನಡುವೆ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಲೋಕಸಭೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಸಂಸದೀಯ ಸಭೆ ಏರ್ಪಡಿಸಿದ್ದು, ತನ್ನ ನಾಯಕನಾರು ಎಂದು ತೀರ್ಮಾನಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ