ಪ್ರಧಾನಿ ಮೋದಿ ಯಾವ ಸೀಮೆ ಹಿಂದೂ? ರಾಹುಲ್ ಗಾಂಧಿ ಲೇವಡಿ
ಇನ್ನು, ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಕೇಂದ್ರದ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿರುವ ರಾಹುಲ್ ‘ನಿಮಗೆ ಗೊತ್ತಾ? ಮನಮೋಹನ್ ಸಿಂಗ್ ತಮ್ಮ ಅವಧಿಯಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಸೇನಾಧಿಕಾರಿಗಳು ಅವರ ಬಳಿ ಬಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಬೇಕೆಂದು ಕೇಳಿಕೊಂಡಿದ್ದರು. ಅಲ್ಲದೆ, ಅದನ್ನು ರಹಸ್ಯವಾಗಿಯೇ ಇರಿಸಿದ್ದರು. ನಮ್ಮ ಸ್ವಹಿತಕ್ಕೆ ಇದನ್ನು ಪ್ರಚಾರ ಮಾಡಿಕೊಂಡು ಬಂದಿಲ್ಲ ಅಷ್ಟೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.