ಟ್ವಿಟರ್‌ನಲ್ಲಿ ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿರುವ ರಾಹುಲ್, ನವ ವರ್ಷ ನಿಮಗೆ ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ ಮತ್ತು ತಾವು ಇಂದು ವಿದೇಶಕ್ಕೆ ತೆರಳುತ್ತಿದ್ದು ಜನವರಿ 4ಕ್ಕೆ ವಾಪಸ್ಸಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಯಾವ ದೇಶಕ್ಕೆ ಹೋಗುತ್ತಿದ್ದೇನೆ ಎಂಬುದನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಕೆಲ ಮೂಲಗಳ ಪ್ರಕಾರ ರಾಹುಲ್ ಲಂಡನ್‌ಗೆ ತೆರಳುತ್ತಿದ್ದಾರೆ.