ಮಸೀದಿಗೆ ಭೇಟಿ ಕೊಡ್ತೀರಿ, ಮಂದಿರ ಎಂದರೆ ಧ್ವೇಷ ಯಾಕೆ?: ರಾಹುಲ್ ಗಾಂಧಿ ಹಳೇ ಫೋಟೋ ವೈರಲ್

Krishnaveni K

ಶುಕ್ರವಾರ, 12 ಜನವರಿ 2024 (12:21 IST)
Photo Courtesy: Twitter
ನವದೆಹಲಿ: ಅಯೋಧ‍್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿರುವ ಕಾಂಗ್ರೆಸ್ ಈಗ ಹಿಂದೂಗಳ ಮತ್ತು ಬಿಜೆಪಿಯ ತೀವ್ರ ಟೀಕೆಗೆ ಗುರಿಯಾಗಿದೆ.

ಇದೀಗ ರಾಹುಲ್ ಗಾಂಧಿಯ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಸೀದಿಗೆ ಭೇಟಿ ನೀಡಲು ನಿಮಗೆ ಯಾವುದೇ ಸಮಸ್ಯೆಯಿಲ್ಲ, ಮಂದಿರ ಎಂದರೆ ಅಸಡ್ಡೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರಾಹುಲ್ ಗಾಂಧಿ ಈ ಹಿಂದೆ ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ ಭೇಟಿ ಕೊಟ್ಟ ಫೋಟೋವನ್ನು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಮಸೀದಿಗೆ ಭೇಟಿ ನೀಡಲು ನಿಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹಿಂದೂ ಮಂದಿರಗಳಿಗೆ ಭೇಟಿ ನೀಡುವಾಗ ಧರ್ಮ ಅಡ್ಡಬರುತ್ತದೆ ಎಂದು ಟೀಕಿಸಿದ್ದಾರೆ.

ಇದರಿಂದಲೇ ನಿಮಗೆ ಹಿಂದೂಗಳ ಬಗ್ಗೆ ಯಾವ ರೀತಿಯ ಭಾವನೆ ಇದೆ ಎಂದು ಗೊತ್ತಾಗುತ್ತದೆ ಎಂದು ಹಲವರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ನೆಹರೂ ಕುಟುಂಬದ ಮೂರು ತಲೆಮಾರು ಬಾಬರ್ ಮಸೀದಿಗೆ ಭೇಟಿ ಕೊಟ್ಟಿದೆ. ಆದರೆ ರಾಮಲಲ್ಲಾ ಮೇಲೆ ನಿಮಗೆ ಧ್ವೇಷ ಯಾಕೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ