ಸಂದರ್ಶನವೊಂದರಲ್ಲಿ ಮಾತನಾಢಿದ ಅವರು,’ಮೋದಿ ಅಧಿಕಾರದಿಂದ ಇಳಿದ ಮೇಲೆ ಪ್ರದಾನಿ ಹುದ್ದೆಗೆ ಮೂವರು ನಾಯಕರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಇವರಲ್ಲಿ ಒಬ್ಬರು ಪ್ರಧಾನಿ ಹುದ್ದೆಗೆ ಅರ್ಹರು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ ಎಂಬ ಕುರಿತ ಮಾತುಗಳೆಲ್ಲ ಆಧಾರ ರಹಿತ. ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ರಾಹುಲ್ ಅನೇಕ ಬಾರಿ ಹೇಳಿದ್ದಾರೆ. ನಾನು ಪ್ರಧಾನಿ ಹುದ್ದೆಯ ಆಸೆ ಹೊಂದಿಲ್ಲ. ಆ ಬಗ್ಗೆ ಚುನಾವಣೆ ನಂತರ ಯೋಚನೆ ಮಾಡುತ್ತೇವೆ ಎಂದು ರಾಹುಲ್ ಬಹಿರಂಗವಾಗಿಯೇ ಹೇಳಿದ್ದರು ಹಾಗಾಗಿ ಅವರ ಹೆಸರನ್ನು ಹೇಳಿಲ್ಲ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.