ಮೋದಿ ಸರ್ಕಾರಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ ಎಂದ ರಾಹುಲ್ ಗಾಂಧಿ

ಸೋಮವಾರ, 23 ಜುಲೈ 2018 (09:15 IST)
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸರ್ಕಾರಕ್ಕೆ ಅವನತಿಯ ದಿನಗಳು ಆರಂಭವಾಗಿದೆ ಎಂದಿದ್ದಾರೆ.

ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, 2019 ರ ಚುನಾವಣೆಗೆ ಈಗಿನ ಮಹಾ ಮೈತ್ರಿ ಮುಂದುವರಿಸುವ ಸುಳಿವು ನೀಡಿದ್ದಾರೆ.

ಭಾರತದ ಬಡವರಲ್ಲಿ ಒಂದು ರೀತಿಯ ಭಯ ಮತ್ತು ಆತಂಕವಿದೆ. ನಾವು ನಮ್ಮ ದೇಶದ ಜನರನ್ನು ಈ ಅಪಾಯಕಾರಿ ಆಡಳಿತದಿಂದ ಕಾಪಾಡಬೇಕಿದೆ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಜನರ ಧ್ವನಿ ಎಂದು ಬಣ್ಣಿಸಿದ್ದಲ್ಲದೆ, ಬಿಜೆಪಿಯ ದೌರ್ಜನ್ಯದಿಂದ ಜನರನ್ನು ಕಾಪಾಡುವ ಜವಾಬ್ಧಾರಿ ನಮ್ಮದು ಎಂದಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಮಾತನಾಡಿ ಮೋದಿ ಸರ್ಕಾರ ಸ್ವಯಂ ಹೊಗಳಿಕೊಳ್ಳುವುದರಲ್ಲೇ ಕಾಲ ಕಳೀತಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ