ಟಿಡಿಪಿಯಲ್ಲಿ ಕಳೆದುಕೊಂಡ ದೋಸ್ತಿಯನ್ನು ಟಿಆರ್ ಎಸ್ ನಲ್ಲಿ ಪಡೆಯಲಿರುವ ಬಿಜೆಪಿ

ಸೋಮವಾರ, 23 ಜುಲೈ 2018 (08:52 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ ಆಡಳಿತಾರೂಢ ಟಿಆರ್ ಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆಯೇ? ಹೀಗೊಂದು ಸಾಧ್ಯತೆ ದಟ್ಟವಾಗಿದೆ.
 

ಅತ್ತ ಆಂಧ್ರಪ್ರದೇಶದಲ್ಲಿ ಟಿಡಿಪಿ ಜತೆಗಿನ ಸಖ್ಯ ಕಡಿದುಕೊಂಡಿರುವ ಆಗಿರುವ ನಷ್ಟವನ್ನು ಟಿಆರ್ ಎಸ್ ಮೂಲಕ ಪಡೆದುಕೊಳ್ಳಲು ಬಿಜೆಪಿ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇದರ ಪೂರ್ವಭಾವಿಯಾಗಿ ಮೊನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಟಿಆರ್ ಎಸ್ ನ್ನು ಕೊಂಡಾಡಿದ್ದಾರೆ ಎನ್ನಲಾಗಿದೆ.

ಅವಿಶ್ವಾಸ ಮತ ಸಂದರ್ಭದಲ್ಲಿ ಟಿಆರ್ ಎಸ್ ತಟಸ್ಥವಾಗಿ ಉಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ಇನ್ನೊಂದೆಡೆ ತೃತೀಯ ರಂಗದಲ್ಲಿ ಸೇರಿಕೊಳ್ಳುವ ಬಗ್ಗೆ ಸಿಎಂ ಚಂದ್ರಶೇಖರ್ ರಾವ್ ನಿರಾಸಕ್ತಿ ವಹಿಸಿರುವುದು ಅವರ ಬಿಜೆಪಿ ಸೇರ್ಪಡೆ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ