ಶಶಿ ತರೂರ್ ಗೆ ಪರೋಕ್ಷ ಎಚ್ಚರಿಕೆ ಕೊಟ್ಟ ರಾಹುಲ್ ಗಾಂಧಿ
ಹಿಂದೂ ಪಾಕಿಸ್ತಾನ, ತಾಲಿಬಾನ್ ಎಂಬಿತ್ಯಾದಿ ಪದ ಬಳಸಿ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದ ಶಶಿ ತರೂರ್ ಗೆ ಪರೋಕ್ಷ ಎಚ್ಚರಿಕೆ ನೀಡಿರುವ ರಾಹುಲ್, ಕಾಂಗ್ರೆಸ್ ಪಕ್ಷದ ಮಹತ್ವದ ಹೋರಾಟ ಸಂದರ್ಭದಲ್ಲಿ ಹಾನಿ ಉಂಟುಮಾಡುವಂತಹ ಮಾತನಾಡುವವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ರಾಹುಲ್ ಖಡಾ ಖಂಡಿತವಾಗಿ ಹೇಳಿದ್ದಾರೆ.
ಈ ಹಿಂದೆ ನೀಚ್ ಆದ್ಮಿ ಎಂದು ಪ್ರಧಾನಿ ಮೋದಿ ವಿರುದ್ಧ ಕಾಮೆಂಟ್ ಮಾಡಿ ಟೀಕೆಗೊಳಗಾಗಿದ್ದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರನ್ನೂ ಪಕ್ಷದಿಂದ ವಜಾಗೊಳಿಸಲಾಗಿತ್ತು. ಇದೀಗ ತರೂರ್ ಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.