ತಂದೆ ರಾಜೀವ್ ಗಾಂಧಿ ಜತೆ ಐಎನ್ಎಸ್ ವಿರಾಟ್ ನೌಕೆಯಲ್ಲಿ ಹೋಗಿದ್ದು ನಿಜ ಎಂದ ರಾಹುಲ್ ಗಾಂಧಿ

ಶುಕ್ರವಾರ, 10 ಮೇ 2019 (09:16 IST)
ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ನೌಕೆಯನ್ನು ತಮ್ಮ ವೈಯಕ್ತಿಕ ಮೋಜಿಗೆ ಬಳಸಿಕೊಂಡರು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.


ನಾನೂ ಕೂಡಾ ಅಂದು ತಂದೆ ಜತೆ ಐಎನ್ಎಸ್ ವಿರಾಟ್ ನೌಕೆಯಲ್ಲಿ ಸಾಗಿದ್ದೆ. ಆದರೆ ಅದು ಪ್ರವಾಸವಾಗಿರಲಿಲ್ಲ. ಅಫೀಷಿಯಲ್ ಟೂರ್ ಆಗಿತ್ತು ಎಂದು ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

‘ಯಾರೇ ಆದರೂ ಮೋಜು ಮಾಡಲು ಐಎನ್ಎನ್ ವಿರಾಟ್ ನೌಕೆಯಲ್ಲಿ ಯಾಕೆ ಹೋಗಬೇಕು? ಅದು ಯುದ್ಧ ನೌಕೆ. ಪ್ರಧಾನಿ ಮೋದಿಗೆ ನನ್ನ ಕುಟುಂಬವನ್ನು ನೆನೆಯುವುದೇ ಕೆಲಸವಾಗಿಬಿಟ್ಟಿದೆ. ನಾನೂ ಕೂಡಾ ಅವರಷ್ಟು ನನ್ನ ಕುಟುಂಬದವರನ್ನು ಸ್ಮರಿಸಿಕೊಳ್ಳುವುದಿಲ್ಲ’ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ