Rahul Gandhi: ಚುನಾವಣೆ ಆಯೋಗವೇ ಅಕ್ರಮ ಮಾಡ್ತಿದೆ: ಅಮೆರಿಕಾದಲ್ಲಿ ಕಿಡಿ ಕಾರಿದ ರಾಹುಲ್ ಗಾಂಧಿ, ದೇಶದ್ರೋಹಿ ಎಂದ ಬಿಜೆಪಿ
ರಾಹುಲ್ ಗಾಂಧಿ ಇದೀಗ ಅಮೆರಿಕಾ ಪ್ರವಾಸದಲ್ಲಿದ್ದು ವಿವಿಧ ಸಂವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಬೋಸ್ಟನ್ ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಚುನಾವಣೆ ಪ್ರಕ್ರಿಯೆ ಬಗ್ಗೆ ಕಿಡಿ ಕಾರಿದ್ದಾರೆ.
ಚುನಾವಣೆ ಪ್ರಕ್ರಿಯೆ ವಿಚಾರದಲ್ಲಿ ಚುನಾವಣಾ ಆಯೋಗವೇ ಅಕ್ರಮ ಮಾಡುತ್ತಿರುವುದು ನೂರು ಪ್ರತಿಶತ ಸತ್ಯ. ಇದನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಾಯಪೂರ್ತಿಯಾದ ಜನರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾರರು ವೋಟ್ ಮಾಡಿದ್ದಾರೆ. ಚುನಾವಣಾ ಆಯೋಗ ನಮಗೆ 5.30 ಕ್ಕೆ ರಾತ್ರಿ 7.30 ಕ್ಕೆ ಮತದಾನ ಪ್ರಮಾಣದ ವಿವರ ನೀಡಿತ್ತು. 65 ಲಕ್ಷ ಮತದಾರರು ಮತ ಹಾಕಿದ್ದಾರೆ ಎಂದಿತ್ತು. ಅಂದರೆ ಕೇವಲ 2 ಗಂಟೆ ಅವಧಿಯಲ್ಲಿ ಹೆಚ್ಚುವರಿಯಾಗಿ 65 ಲಕ್ಷ ಮತದಾರರು ಮತ ಹಾಕಿದ್ದಾರೆ. ಇದು ಅಸಾಧ್ಯ. ವ್ಯಕ್ತಿಯೊಬ್ಬ ಮತ ಚಲಾಯಿಸಲು ಕನಿಷ್ಠ 3 ನಿಮಿಷ ಬೇಕು. ಕೇವಲ 2 ಗಂಟೆಯಲ್ಲಿ 65 ಲಕ್ಷ ಮತ ಬಂದಿದೆ ಎಂದರೆ ನಂಬಲು ಸಾಧ್ಯವಿಲ್ಲ. ವಿಡಿಯೋ ಚಿತ್ರೀಕರಣ ವಿವರ ಕೇಳಿದರೆ ಕೊಡಲು ನಿರಾಕರಿಸಿದರು. ಬಳಿಕ ನಿಯಮ ಕೂಡಾ ಬದಲಾಯಿಸಿದರು ಎಂದು ರಾಹುಲ್ ಆರೋಪಿಸಿದ್ದಾರೆ.
ಇನ್ನು, ರಾಹುಲ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಿದೇಶದಲ್ಲಿ ನಿಂತು ಭಾರತದ ಮಾನ ಹರಾಜು ಹಾಕಲು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ ದೇಶದ್ರೋಹಿ ಎಂದಿದೆ.