ಓಟಿಗಾಗಿ ಊಟ: ರೈತರೊಂದಿಗೆ ರೊಟ್ಟಿ ಸವಿದ ರಾಹುಲ್

ಗುರುವಾರ, 2 ಫೆಬ್ರವರಿ 2017 (16:33 IST)
ಪಂಚರಾಜ್ಯಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ಇಂದು ಪಂಜಾಬ್ ಪ್ರವಾಸದಲ್ಲಿದ್ದು
ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ. 

 
ತಮ್ಮ ಪಕ್ಷಕ್ಕೆ ಮತಗಳನ್ನು ಸೆಳೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ರಾಹುಲ್, ಸಂಗ್ರೂರ್ ಜಿಲ್ಲೆಯ ಬಲಿಯಾನ್ ಗ್ರಾಮದಲ್ಲಿ ರೈತರೊಂದಿಗೆ ಕುಳಿತು ರೊಟ್ಟಿ-ದಾಲ್ ಸಬ್ಜಿ ಸವಿದರು. ನೀಲಿ ಡೆನಿಮ್ಸ್‌ ಜೀನ್ಸ್‌, ಬಿಳಿ ಕುರ್ತಾ ಮತ್ತು  ಜಾಕೆಟ್‌ ಧರಿಸಿದ್ದ  ರಾಹುಲ್‌ ಊಟಕ್ಕೂ ಮುಂಚೆ ಗ್ರಾಮದ ಹಿರಿಯರು ಮತ್ತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದರು.ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಗ್ರಾಮಸ್ಥರಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಊಟದ ಬಳಿಕ ಪ್ರಚಾರ ಭಾಷಣ ಮಾಡಿದ ಅವರು, ಕೇಜ್ರಿವಾಲ್ ಪಂಜಾಬ್ ಶಾಂತಿಯನ್ನು ಕದಡುವ ಶಕ್ತಿಗಳಿಗೆ ಸಹಕಾರ ನೀಡುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ. 
 
117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯುತ್ತಿದ್ದು ಆಡಳಿತಾರೂಢ ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿಕೂಟ, ಕಾಂಗ್ರೆಸ್ ಮತ್ತು ಆಪ್ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಇಂದು ಪ್ರಚಾರದ ಕೊನೆಯ ದಿನವಾಗಿದೆ.

ವೆಬ್ದುನಿಯಾವನ್ನು ಓದಿ