ಜಗತ್ತಿನಲ್ಲಿ ಯಾರಿಗೂ ಹೆದರೋದಿಲ್ಲ ಎಂದ ರಾಹುಲ್ ಗಾಂಧಿ

ಶುಕ್ರವಾರ, 2 ಅಕ್ಟೋಬರ್ 2020 (15:17 IST)

ಸುಳ್ಳುಗಳನ್ನು ಸೋಲಿಸಲು ಹೋರಾಟ ನಡೆಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
 

ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಈ ಜಗತ್ತಿನಲ್ಲಿ ತಾವು ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ.

ಸತ್ಯದ ಬಲದಿಂದ ಸುಳ್ಳನ್ನು ಸೋಲಿಸುತ್ತೇನೆ. ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವುದಾಗಿ ತಿಳಿಸಿದ್ದಾರೆ.

ಹತ್ರಾಸ್ ಸಂತ್ರಸ್ತೆಯ ಕುಟುಂಬಕ್ಕೆ ಭೇಟಿ ನೀಡುವುದಕ್ಕೆ ತೆರಳಿದಾಗ ತಮ್ಮನ್ನು ತಡೆದು ದೌರ್ಜನ್ಯ ಎಸಗಿರುವ ಉತ್ತರ ಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ