ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆ ರಾಹುಲ್ ಗಾಂಧಿಯಿಂದ ವಾಸ್ತವ: ಬಿಜೆಪಿ

ಶನಿವಾರ, 18 ಜೂನ್ 2016 (17:08 IST)
ರಾಹುಲ್ ಗಾಂಧಿ ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆಯನ್ನು ವಾಸ್ತವವಾಗಿಸಲಿದ್ದಾರೆ ಎಂದು ಬಿಜೆಪಿ ಪಂಜಾಬ್ ಮಾಜಿ ಅಧ್ಯಕ್ಷ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಮಲ್ ಶರ್ಮಾ ವ್ಯಂಗ್ಯವಾಡಿದ್ದಾರೆ.
 
ಕಮಲ್‌ನಾಥ್ ಅವರನ್ನು ಪಂಜಾಬ್ ಉಸ್ತುವಾರಿಯಿಂದ ಕೆಳಗಿಳಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಶರ್ಮಾ ಸಮರ್ಥ ನಾಯಕತ್ವದ ಕೊರತೆಯಿಂದ ಅತಿ ಹಳೆಯ ರಾಜಕೀಯ ಪಕ್ಷ ಈಗ ಯು-ಟರ್ನ್ ಪಕ್ಷವಾಗಿಬಿಟ್ಟಿದೆ ಮತ್ತು ರಾಹುಲ್ ಗಾಂಧಿ ಸದ್ಯದಲ್ಲಿಯೇ ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆಯನ್ನು ಸತ್ಯವಾಗಿಸಲಿದ್ದಾರೆ ಎಂದು ಹೇಳಿದ್ದಾರೆ. 
 
ಪಂಜಾಬ್ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಹುಲ್ ಈ ಮೊದಲು ಹೇಳಿದ್ದರು. ಆದರೆ ಎರಡನೆಯ ಬಾರಿಗೆ ಪಂಜಾಬ್‌ಗೆ ಭೇಟಿ ನೀಡಿದಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಸಂಪೂರ್ಣವಾಗಿ ಮೌನ ತಾಳಿದ್ದಾರೆ. ಇತರ ಪಕ್ಷಗಳನ್ನು ಬಿಡಿ, ಸ್ವತಃ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರೇ ಅವರ ಯು-ಟರ್ನ್ ವರ್ತನೆಯಿಂದ ಆಶ್ಚರ್ಯ ಚಕಿತರಾಗಿದ್ದಾರೆ ಎಂದಿದ್ದಾರೆ ಶರ್ಮಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ