ಸಂಸತ್ತಿನಲ್ಲಿ ಕಣ್ಣು ಹೊಡೆದ ರಾಹುಲ್ ಗಾಂಧಿಗೆ ಸ್ಪೀಕರ್ ಕ್ಲಾಸ್
‘ರಾಹುಲ್ ವರ್ತನೆ ಸಂಸತ್ತಿನ ಘನತೆಗೆ ತಕ್ಕುದಲ್ಲ. ಅಪ್ಪಿಕೊಳ‍್ಳುವುದು, ಮತ್ತೆ ಕಣ್ಣು ಹೊಡೆಯುವುದು ಇದೆಲ್ಲಾ ನನಗೂ ಇಷ್ಟವಾಗಿಲ್ಲ. ಸದನದ ಗೌರವವನ್ನು ನಾವೇ ಕಾಪಾಡಿಕೊಳ್ಳಬೇಕು. ಹೊರಗಿನಿಂದ ಬಂದು ಯಾರೋ ಇದನ್ನು ಮಾಡಲಾರರು’ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.
‘ಎಲ್ಲರೂ ಸದನದಲ್ಲಿ ಪ್ರೀತಿಯಿಂದ ಇರಬೇಕು. ಧ್ವೇಷ ಇರಬಾರದು ಎಂದು ನಾನು ಬಯಸುತ್ತೇನೆ. ಆದರೆ ರಾಹುಲ್ ನನ್ನ ಮಗನಂತೆ. ಮಗ ತಪ್ಪು ಮಾಡಿದಾಗ ತಿದ್ದುವುದು ಅಮ್ಮನ ಕರ್ತವ್ಯ. ಅದನ್ನೇ ಮಾಡಿದ್ದೇನೆ’ ಎಂದು ಸುಮಿತ್ರಾ ಮಹಾಜನ್ ರಾಹುಲ್ ಗೆ ಬುದ್ಧಿ ಹೇಳಿದ್ದಾರೆ.