ಸೋನಿಯಾ, ರಾಹುಲ್ ಗಾಂಧಿಗಿಲ್ಲ ಎಸ್ ಪಿಜಿ ಭದ್ರತೆ

ಶನಿವಾರ, 9 ನವೆಂಬರ್ 2019 (09:22 IST)
ನವದೆಹಲಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾಗೆ ಇನ್ನು ಮುಂದೆ ಎಸ್ ಪಿಜಿ ಭದ್ರತೆ ಇರೋದಿಲ್ಲ. ಬದಲಾಗಿ ಸಿಆರ್ ಪಿಎಫ್ ಕಮಾಂಡೋಗಳು ಭದ್ರತೆ ಒದಗಿಸಲಿದ್ದಾರೆ.


ಇದುವರೆಗೆ ಕಾಂಗ್ರೆಸ್ ಧುರೀಣೆ ಸೋನಿಯಾ ಮತ್ತು ಪರಿವಾರದವರಿಗೆ ಎಸ್ ಪಿಜಿ ಭದ್ರತೆ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಎಸ್ ಪಿಜಿ ಭದ್ರತೆ ಇರೋದಿಲ್ಲ. ಬದಲಾಗಿ ಕೇಂದ್ರೀಯ ಮೀಸಲು ಪಡೆ ಪೊಲೀಸ್ ಅಧಿಕಾರಿಗಳು ಭದ್ರತೆ ಒದಗಿಸಲಿದ್ದಾರೆ.

ಸೋನಿಯಾ ಮತ್ತು ಕುಟುಂಬದವರಿಗೆ ಸದ್ಯಕ್ಕೆ ಜೀವ ಬೆದರಿಕೆಯಿಲ್ಲ ಎಂದು ಭದ್ರತಾ ಸಂಸ್ಥೆಗಳ ವರದಿಗಳ ಬೆನ್ನಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ