Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

Krishnaveni K

ಶನಿವಾರ, 24 ಮೇ 2025 (12:17 IST)
ಜೈಪುರ: ದೇಶದಾದ್ಯಂತ ಈಗ ಪಾಕಿಸ್ತಾನ ಎಂಬ ಹೆಸರು ಕೇಳಿದರೇ ಜನ ಉರಿದುಬೀಳುತ್ತಿದ್ದಾರೆ. ಇದೇ ಕೋಪಕ್ಕೆ ಈಗ ಮೈಸೂರ್ ಪಾಕ್ ಎನ್ನುವ ಸಿಹಿ ತಿಂಡಿ ಗತಿ ಏನಾಗಿದೆ ನೋಡಿ.

ಅಪ್ಪಟ ಕನ್ನಡ ನಾಡಿನ ಮೈಸೂರ್ ಪಾಕ್ ಎನ್ನುವ ಸಿಹಿ ತಿಂಡಿ ದೇಶದಾದ್ಯಂತ ಸಿಗುತ್ತದೆ. ಮೈಸೂರ್ ಪಾಕ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದೇ ರೀತಿ ರಾಜಸ್ಥಾನ್ ನ ಸ್ವೀಟ್ ಸ್ಟಾಲ್ ಒಂದರಲ್ಲೂ ಮೈಸೂರ್ ಪಾಕ್ ಎಂಬ ಹೆಸರಿನಲ್ಲಿ ಇದುವರೆಗೆ ಈ ಸ್ಟೀಟ್ ಮಾರಾಟವಾಗುತ್ತಿತ್ತು.

ಆದರೆ ಯಾವಾಗ ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಾಯ್ತೋ ಎಲ್ಲವೂ ಚೇಂಜ್ ಆಯ್ತು. ಈಗ ಮೈಸೂರ್ ಪಾಕ್ ಹೆಸರಿನಲ್ಲಿ ಪಾಕ್ ಎನ್ನುವ ಶಬ್ಧ ಇದೆ ಎನ್ನುವ ಕಾರಣಕ್ಕೆ ಮೈಸೂರ್ ಶ್ರೀ ಎಂದು ಮರು ನಾಮಕರಣ ಮಾಡಿದ್ದಾರೆ.

ಕೇವಲ ಮೈಸೂರ್ ಪಾಕ್ ಮಾತ್ರವಲ್ಲ, ಗೋಂದ್ ಪಾಕ್, ಮೋತ್ ಪಾಕ್ ಎನ್ನುವ ಸಿಹಿತಿ ತಿಂಡಿಗಳ ಹೆಸರೆಲ್ಲಾ ಈಗ ಗೋದ್ ಶ್ರೀ, ಮೋತಿ ಶ್ರೀ ಎಂದು ಬದಲಾಗಿದೆ. ನಾವು ಇನ್ನು ಮುಂದೆ ಪಾಕ್ ಎನ್ನುವ ಹೆಸರೇ ಬಳಸಲ್ಲ ಎಂದಿದ್ದಾರೆ ಬೇಕರಿ ಮಾಲಿಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ