ಬೆದರಿಕೆ ಹಾಕುತ್ತಿದ್ದ ಮಹಿಳೆಯನ್ನು ಕೊಂದು ಪೊಲೀಸ್ ವರಿಷ್ಠಾಧಿಕಾರಿ ಆತ್ಮಹತ್ಯೆ

ಶುಕ್ರವಾರ, 23 ಡಿಸೆಂಬರ್ 2016 (15:17 IST)
ಭಯೋತ್ಪಾದನಾ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯೋರ್ವರು ತಮಗೆ ಬೆದರಿಕೆ ಹಾಕುತ್ತಿದ್ದ ಯುವತಿಯನ್ನು ಹತ್ಯೆಗೈದು ಗುಂಡಿಟ್ಟು ಕೊಂದು ತಾವು ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಜೈಪುರದಲ್ಲಿ ನಡೆದಿದೆ. 

ಅಧಿಕಾರಿ ಆಶೀಸ್ ಪ್ರಭಾಕರ್ (42) ಮತ್ತು ಹತ್ಯೆಗೊಳಗಾದ ಪೂನಮ್ ಶರ್ಮಾ ಅವರಿಬ್ಬರ ಶವ ತಲೆಗೆ ಬುಲೆಟ್ ಗಾಯವಾಗಿರುವ ಸ್ಥಿತಿಯಲ್ಲಿ ಜಗತ್ಪುರಾ ಪ್ರದೇಶದ ಬಾಂಬೈ ಆಸ್ಪತ್ರೆ ಬಳಿ ನಿಲ್ಲಿಸಿ ಲಾಕ್ ಮಾಡಲಾಗಿದ್ದ ಎಸ್‌ಯುವಿ ಒಳಗಡೆ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ. 
 
ಪ್ರಭಾಕರ್ ಅವರಿಂದ ಕೊಲೆಯಾದ ಯುವತಿ 28ರಿಂದ 30 ವರ್ಷದೊಳಗಿನವಳು ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಸರ್ವಿಸ್ ರಿವಾಲ್ವರ್‌ನಿಂದಲೇ ಹತ್ಯೆ ಮತ್ತು ಆತ್ಮಹತ್ಯೆ ನಡೆದಿದೆ. 
 
2 ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಅಧಿಕಾರಿ ತಪ್ಪು ದಾರಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಪತ್ನಿಯ ಕ್ಷಮೆ ಕೇಳಿದ್ದಾರೆ. ಆ ಪತ್ರದಲ್ಲಿ ಕೆಲವು ಮೊಬೈಲ್ ಸಂಖ್ಯೆ ಮತ್ತು ಫೇಸ್‌ಬುಕ್ ಪ್ರೊಫೈಲ್ ಸಹ ನಮೂದಿಸಿರುವ ಅವರು ಕೆಲವರು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎಂದಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಬರೆದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ