ಗುಂಪು ಚದುರಿಸಲು ಖಾರದ ಪುಡಿಯ ಗ್ರೆನೆಡ್ ಬಳಕೆಗೆ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್

ಶನಿವಾರ, 3 ಸೆಪ್ಟಂಬರ್ 2016 (18:59 IST)
ಜಮ್ಮು ಕಾಶ್ಮಿರ ಪ್ರದೇಶದಲ್ಲಿ ಪೆಲ್ಲೆಟ್ ಗನ್‌ಗಳ ಬದಲಿಗೆ ಪಾವಾ ಶೆಲ್‌ಗಳನ್ನು ಬಳಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 
ಪೆಲ್ಲೆಟ್ ಗನ್‌ಗಳ ಬದಲಿಗೆ ಅಪರೂಪದಿಂದ ಅಪರೂಪದ ಸಂದರ್ಭಗಳಲ್ಲಿ ಬಳಸುವ ಮೆಣಸಿನ ಪುಡಿ ತುಂಬಿರುವ ಗ್ರೆನೆಡ್‌ಗಳ ಬಳಸಲು ಸಿಂಗ್ ಅನುಮತಿ ನೀಡಿದ್ದಾರೆ.
 
ಪೆಲ್ಲೆಟ್ ಗನ್‌ಗಳ ಬದಲಿಗೆ ಪೆಲಾರ್‌ಗೊನಿಕ್ ಆಸಿಡ್ ವನಿಲಿಯಲ್ ಎಮೈಡ್ (ಪಾವಾ) ಗ್ರೆನೆಡ್‌ಗಳನ್ನು ಗುಂಪುಗಳನ್ನು ಚದುರಿಸಲು ಬಳಸಲು ಅನುಮತಿ ನೀಡಲಾಗಿದೆ. ನಾಳೆ 1000 ಶೆಲ್‌ಗಳನ್ನು ಜಮ್ಮು ಕಾಶ್ಮಿರಕ್ಕೆ ರವಾನಿಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
 
ಕಲೆದ ಆಗಸ್ಟ್ 24-25 ರಂದು ಕಾಶ್ಮಿರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್, ಪೆಲ್ಲೆಟ್ ಗನ್‌ಗಳ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಪೆಲ್ಲೆಟ್ ಗನ್‌ಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿಲ್ಲ. ಅಪರೂಪದ ಸಂದರ್ಭಗಳಲ್ಲಿ ಬಳಸಲಾಗುವುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
 
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ವಿ.ಎಸ್.ಎನ್ ಪ್ರಸಾದ್ ನೇತೃತ್ವದ ಏಳು ತಜ್ಞರ ಸಮಿತಿ ಪಾವಾ ಬಳಸಲು ಶಿಫಾರಸ್ಸು ಮಾಡಿತ್ತು.
 
ಜಮ್ಮು ಕಾಶ್ಮಿರದಲ್ಲಿ ನಡೆದ ಹಿಂಸಾಚಾರ ಸಂದರ್ಭಗಳಲ್ಲಿ ಸೇನಾಪಡೆಗಳು ಪೆಲ್ಲೆಟ್ ಗನ್‌ಗಳನ್ನು ಬಳಸಿದ್ದರಿಂದ ಅನೇಕ ಪ್ರತಿಭಟನಾಕಾರರು ಕಣ್ಣುಗಳನ್ನು ಕಳೆದುಕೊಂಡಿದ್ದರು. ಇದೀಗ ಪೆಲ್ಲೆಟ್ ಗನ್‌ಗಳ ಬದಲಿಗೆ ಪಾವಾ ಗ್ರೆನೆಡ್‌ಗಳನ್ನು ಬಳಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ