ಸಾಮಾಜಿಕ, ರಾಜಕೀಯದತ್ತ ಗಮನಹರಿಸಿದ ದೇಶದ ಪ್ರಥಮ ಪ್ರಧಾನಿ ಮೋದಿ: ರಾಜನಾಥ್ ಸಿಂಗ್

ಶುಕ್ರವಾರ, 17 ಜೂನ್ 2016 (14:49 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಮತ್ತು ರಾಜಕೀಯ ಪಾತ್ರವನ್ನು ಒಂದೇ ಬಾರಿ ನಿಭಾಯಿಸಿದ ದೇಶದ ಮೊದಲ ಪ್ರಧಾನಿಯಾಗಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಹೊಗಳಿದ್ದಾರೆ.
 
ಸಾಮಾನ್ಯವಾಗಿ ರಾಜಕೀಯದಲ್ಲಿರುವ ವ್ಯಕ್ತಿಗಳು ರಾಜಕೀಯದ ಬಗ್ಗೆ ಚಿಂತನೆ ಮಾಡುತ್ತಾರೆ. ಆದರೆ, ಮೊದಲ ಬಾರಿಗೆ ಪ್ರಧಾನಿ ಮೋದಿ ರಾಜಕೀಯಕೊಂದಿಗೆ ಸಮಾಜಿಕ ಕಳಕಳಿಯಲ್ಲಿಯೂ ತೊಡಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಕಳೆದ 2014ರಲ್ಲಿ ಪ್ರಧಾನಿ ಮೋದಿ ಆರಂಭಿಸಿದ ಸ್ವಚ್ಚ ಬಾರತ್ ಅಭಿಯಾನ ದೇಶದಲ್ಲಿಯೇ ಮೊದಲ ಬಾರಿ ಆರಂಭಿಸಲಾಗಿತ್ತು. ದೇಶದ ಖ್ಯಾತ ದಿಗ್ಗಜರು ಕಸಬರಿಗೆಯನ್ನು ಹಿಡಿದು ರಸ್ತೆಗಳನ್ನು ಸ್ವಚ್ಚಗೊಳಿಸುವಲ್ಲಿ ನಿರತರಾಗಿದ್ದರು ಎಂದರು.
 
ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದ ಜನತೆಯ ಚಿಂತನೆಯಲ್ಲಿ ಭಾರಿ ಬದಲಾವಣೆಯಾಗಿದೆ. ಪ್ರಧಾನಿ ಮೋದಿಯವರ ಒಂದೇ ಒಂದು ಕರೆಯ ಮೇರೆಗೆ 1.5 ಕೋಟಿ ಜನ ತಮ್ಮ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರಕಾರಕ್ಕೆ ವಾಪಸ್ ನೀಡಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ