ಮೋದಿ ಪ್ರಮಾಣ ವಚನಕ್ಕೆ ಶಾರುಖ್ ಖಾನ್, ರಜನೀಕಾಂತ್ ಸೇರಿದಂತೆ ಗಣ್ಯರ ದಂಡು

Krishnaveni K

ಭಾನುವಾರ, 9 ಜೂನ್ 2024 (18:57 IST)
ನವದೆಹಲಿ: ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಐತಿಹಾಸಿಕ ಗಳಿಗೆಗೆ ರಾಜಕೀಯದ ಗಣ್ಯರು ಮಾತ್ರವಲ್ಲದೆ, ನಟ ಶಾರುಖ್ ಖಾನ್, ಅಕ್ಷಯ್ ಕುಮಾರ್, ರಜನೀಕಾಂತ್ ಸೇರಿದಂತೆ ಗಣ್ಯಾತಿ ಗಣ್ಯರ ದಂಡೇ ಆಗಮಿಸಿದೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ 65 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಭೂತಾನ್ ದೊರೆ ಸೇರಿದಂತೆ ವಿದೇಶೀ ಗಣ್ಯರು ಆಗಮಿಸಿದ್ದಾರೆ.

ಅವರ ಜೊತಗೆ ಸಿನಿಮಾ ರಂಗದಿಂದ ನಟ ರಜನೀಕಾಂತ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಆಗಮಿಸಿದ್ದಾರೆ. ಅಲ್ಲದೆ ಉದ್ಯಮ ವಲಯದಿಂದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ, ಅದಾನಿ ಸಂಸ್ಥೆಯ ಗೌತಮ್ ಅದಾನಿ,  ವಿವಿಧ ಮಠಾಧೀಶರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶೇಷ ಆಹ್ವಾನಿತರು ರಾಷ್ಟ್ರಪತಿ ಭವನಕ್ಕೆ ಬಂದಿದ್ದಾರೆ.

ಇನ್ನು, ವಿಪಕ್ಷಗಳ ಕಡೆಯಿಂದ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕೂಡಾ ಆಗಮಿಸಿದ್ದಾರೆ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಪಕ್ಷಗಳಿಗೂ ಆಹ್ವಾನ ನೀಡಲಾಗಿತ್ತು. ಇವರಲ್ಲದೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಪತ್ನಿ ಸಮೇತರಾಗಿ ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ