ರಾಹುಲ್ ಗಾಂಧಿ ನಿಯೋಗದ ಜತೆ ಜರ್ಮನಿ ಪ್ರವಾಸದಲ್ಲಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ನಿಮ್ಮ ರಾಜ್ಯದಲ್ಲಿ ಕೊಡವರು ಪ್ರವಾಹದಿಂದ ಕಂಗೆಟ್ಟಿರುವಾಗ ನೀವು ಜರ್ಮನಿಯಲ್ಲಿ ಆರಾಮವಾಗಿ ಫೋಟೋ ತೆಗೆದುಕೊಂಡು ಎಂಜಾಯ್ ಮಾಡ್ತಿದ್ದೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಇದರ ಜತೆಗೆ ವಿಶೇಷವಾಗಿ ಮಿಲಿಂದ್ ದೇವೋರಾರನ್ನು ರಮ್ಯಾ ತಬ್ಬಿಕೊಂಡಿರುವ ಫೋಟೋ ಅಂತೂ ಸಿಕ್ಕಾಪಟ್ಟೆ ಟ್ರೋಲ್ ಗೊಳಗಾಗಿದೆ. ಮಿಲಿಂದ್ ತುಂಬಾ ನೀಳಕಾಯದ ವ್ಯಕ್ತಿ. ಹೀಗಾಗಿ ರಮ್ಯಾಗೆ ನೀವು ಯಾಕೆ ಗ್ರೌಂಡ್ ಫ್ಲೋರ್ ನಲ್ಲಿ ನಿಂತು ಅವರ ಜತೆ ಫೋಟೋ ತೆಗೆದಿದ್ದೀರಿ ಎಂದು ಕಾಲೆಳೆದಿದ್ದಾರೆ.