ಸಚಿವೆ ಸುಷ್ಮಾ ಸ್ವರಾಜ್ ಗೆ ಮಾಡಲು ಬೇರೆ ಕೆಲಸವಿಲ್ಲ: ಮತ್ತೆ ರಾಹುಲ್ ಗಾಂಧಿ ವಿವಾದಿತ ಹೇಳಿಕೆ
‘ನೀವು ಗಮನಿಸಿರಬಹುದು. ಕೆಲವರು ಹೇಳುತ್ತಾರೆ, ವಿದೇಶಾಂಗ ಸಚಿವೆ ವೀಸಾ ವಿತರಣೆ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅಂದರೆ ಅದರ ಅರ್ಥ ಅವರಿಗೆ ಅದರ ಹೊರತು ಬೇರೆ ಕೆಲಸವಿಲ್ಲ. ವಿದೇಶಾಂಗ ಇಲಾಖೆಯನ್ನು ಪ್ರಧಾನಿ ಕಾರ್ಯಾಲಯವೇ ನಿಯಂತ್ರಿಸುತ್ತಿದೆ ಎಂದಲ್ಲವೇ?’ ಎಂದು ರಾಹುಲ್ ಕಟು ಟೀಕೆ ಮಾಡಿದ್ದಾರೆ. ಜರ್ಮನಿ ಪ್ರವಾಸದಲ್ಲಿರುವ ರಾಹುಲ್ ಹೇಳಿಕೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಅದರ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ನೋಡಬೇಕು.