ಬಹರೈನ್ ನಲ್ಲಿ ರಾಹುಲ್ ಗಾಂಧಿ, ಅಂದದ ಫೋಟೋವ ಟ್ವೀಟ್ ಮಾಡಿದ ರಮ್ಯಾ!

ಮಂಗಳವಾರ, 9 ಜನವರಿ 2018 (08:21 IST)
ನವದೆಹಲಿ: ಬಹರೈನ್ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ರಾಜಕುಮಾರನ ಜತೆಗಿರುವ ಸುಂದರ ಫೋಟೋಗಳನ್ನು ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ.
 

ಬಹರೈನ್ ಪ್ರಿನ್ಸ್ ಶೇಖ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಹಾಗೂ ಅಲ್ಲಿನ ಸಚಿವರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಒಮ್ಮೆ ಕ್ಯಾಮರಾಗೆ ಸುಂದರ ಪೋಸ್ ಕೊಡುತ್ತಾರೆ.

ಈ ಸುಂದರ ಫೋಟೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯೂ ಆಗಿರುವ ರಮ್ಯಾ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಯುವರಾಜನ ಪ್ರವಾಸಕ್ಕೆ ಭರ್ಜರಿ ಪ್ರಚಾರ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ