ಬಾಲಕಿ ಮೇಲೆ 80 ಜನರಿಂದ ಅತ್ಯಾಚಾರ !

ಗುರುವಾರ, 21 ಏಪ್ರಿಲ್ 2022 (11:56 IST)
ಹೈದರಾಬಾದ್ : ಬಲವಂತವಾಗಿ ವ್ಯಭಿಚಾರಕ್ಕೆ ತೊಡಗಿಸಲಾಗಿದ್ದ 13 ವರ್ಷದ ಬಾಲಕಿಯ ಮೇಲೆ 80ಕ್ಕೂ ಹೆಚ್ಚು ಜನರು ಆಂಧ್ರಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ 10 ಜನರನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 74ಕ್ಕೇರಿದೆ. ಬಾಲಕಿಯನ್ನು ಗುಂಟೂರು ಪೊಲೀಸರು ರಕ್ಷಿಸಿದ್ದಾರೆ.

ಕೋವಿಡ್ನಿಂದ ತಾಯಿಯನ್ನು ಕಳೆದುಕೊಂಡ ಬಾಲಕಿಯನ್ನು ಆಕೆಯ ತಾಯಿಯ ಸ್ನೇಹಿತೆಯೊಬ್ಬರು ದತ್ತು ಪಡೆದುಕೊಂಡು ಬಲವಂತವಾಗಿ ವ್ಯಭಿಚಾರದಲ್ಲಿ ತೊಡಗಿಸಿದ್ದರು. ಸುಮಾರು 8 ತಿಂಗಳುಗಳ ಕಾಲ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹಲವು ಕಡೆ ಬಾಲಕಿಯ ಮೇಲೆ ಅತ್ಯಾಚಾರಗಳು ನಡೆದಿದ್ದವು.

ಈ ವಿಷಯ ಬಾಲಕಿಯ ತಂದೆಗೆ ತಿಳಿಯುತ್ತಿದ್ದಂತೆ 2021ರ ಆಗಸ್ಟ್ನಲ್ಲಿ ದೂರು ದಾಖಲಿಸಿದ್ದರು. ನಂತರ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಕಳೆದ ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ವ್ಯಕ್ತಿಯನ್ನು ಬಂಧಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇಲ್ಲಿಯವರೆಗೆ ಒಟ್ಟು 74 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ