ನ್ಯಾಯಾಲಯದಿಂದ ಅಪರೂಪದ ತೀರ್ಪು! ?

ಗುರುವಾರ, 24 ಮಾರ್ಚ್ 2022 (11:15 IST)
35 ವಾರಗಳ ನಂತರ ಮಹಿಳೆಯೊಬ್ಬಳು ಅಬಾರ್ಷನ್ ಮಾಡಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್  ಅನುಮತಿ ನೀಡಿದೆ.
 
ಮಹಿಳೆಯ ವೈದ್ಯಕೀಯ ಮಂಡಳಿಯ ವರದಿಯು ಅರ್ಜಿದಾರಳ ಬೆನ್ನುಮೂಳೆಯಲ್ಲಿರುವ ದೋಷ ಮತ್ತು ಭ್ರೂಣ ಸರಿಯಾಗಿ ಬೆಳೆಯದಿರುವುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಈ ಅಪರೂಪದ ಅನುಮತಿಯನ್ನು ಕೋರ್ಟ್ ನೀಡಿದೆ.

ಸರ್ಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಆಸ್ಪತ್ರೆಯ ಒಂಬತ್ತು ಸದಸ್ಯರ ವೈದ್ಯಕೀಯ ಮಂಡಳಿಯ ವರದಿಯಲ್ಲಿ, ತಕ್ಷಣದ ಗರ್ಭಧಾರಣೆಯಿಂದ ಮಗು ಬದುಕುಳಿಯುವ ಅಥವಾ ಸಾಮಾನ್ಯ ಜೀವನವನ್ನು ನಡೆಸುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ನ್ಯಾಯಾಲಯವು ಗಮನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ