ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಪಾಲಿಸಬೇಕು: ಬೊಮ್ಮಾಯಿ

ಮಂಗಳವಾರ, 15 ಮಾರ್ಚ್ 2022 (11:49 IST)
ಬೆಂಗಳೂರು : ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದಿಲ್ಲ. ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಪಾಲಿಸಬೇಕು.

ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಹೈ ಕೋಟ್ ಹಿಜಬ್ ತೀರ್ಪು ನೀಡಿದ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದಿಲ್ಲ. ತ್ರೀ ಸದಸ್ಯ ಪೀಠ ನೀಡಿರುವ ತೀರ್ಪನ್ನು ಎಲ್ಲರೂ ಸಹ ಪಾಲಿಸಬೇಕು. ಇದನ್ನು ಅನುಷ್ಠಾನಗೊಳಿಸುವ ಸಮಯದಲ್ಲಿ ಎಲ್ಲರೂ ಸಹಕರಿಸಿ ಶಾಂತಿಯನ್ನು ಪಾಲಿಸಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ.

ಹಾಗಾಗಿ ನಾನು ಎಲ್ಲ ಜನರಿಗೂ, ಸಮುದಾಯ ನಾಯಕರಿಗೂ, ಪಾಲಕರಿಗೂ, ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳು ಈ ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯಸ್ಥೆಯನ್ನು ಕಾಪಾಡಬೇಕು ಎಂದು ನಾನು ಎಲ್ಲರಲ್ಲಿಯೂ ಕಳಕಳಿಯಿಂದ ವಿನಂತಿಸುತ್ತೇನೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ