ಗ್ರಾಹಕರಿಗೆ ಆರ್‌ಬಿಐನಿಂದ ಹೊಸ ಶಾಕ್

ಗುರುವಾರ, 2 ಮಾರ್ಚ್ 2017 (08:24 IST)
ಕ್ಯಾಶ್‌ಲೆಸ್ ವ್ಯವಹಾರದತ್ತ  ಮತ್ತೊಂದು ಹೆಜ್ಜೆ ಇಟ್ಟಿರುವ ಕೇಂದ್ರ ಬ್ಯಾಂಕ್ ಗ್ರಾಹಕರಿಗೆ ಹೊಸ ಶಾಕ್ ನೀಡಿದೆ.

ಇನ್ನು ಮುಂದೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣ ವಿತ್‌ಡ್ರಾ, ಮತ್ತು ಹಣ ಜಮಾ ಉಚಿತವಾಗಿರಲಿದ್ದು, ಬಳಿಕ ಪ್ರತಿಬಾರಿಯ ವಿತ್‌ಡ್ರಾ, ಹಣ ಜಮಾ ಮಾಡುವುದಕ್ಕೆ 150 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.
 
ಐಸಿಐಸಿಐ, ಹೆಚ್‌ಡಿಎಫ್‌ಸಿ ಸೇರಿದಂತೆ ಕೆಲ ಬ್ಯಾಂಕ್‌ಗಳಲ್ಲಿ ಇಂದಿನಿಂದಲೇ ಈ ನಿಯಮ ಜಾರಿಗೆ ಬರಲಿದೆ.
 
ಈ ಹಿಂದೆ ತಿಂಗಳಿಂದಲೇ 5 ಬಾರಿ ಉಚಿತ ವಿತ್‌ಡ್ರಾ ಅವಕಾಶವಿತ್ತು, ಇದನ್ನು ಮೀರಿದ ಬಳಿಕ 100ರೂಪಾಯಿ ಶುಲ್ಕವನ್ನು ಹೇರಲಾಗುತಿತ್ತು.
 
ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನಿಂದಲೇ ಈ ನಿಯಮವನ್ನು ಜಾರಿಗೊಳಿಸಿದೆ. 
 
ದೇಶಾದ್ಯಂತ ನಗದು ರಹಿತ ಅರ್ಥ ವ್ಯವಸ್ಥೆ ಜಾರಿಗೊಳಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಭಾರತೀಯ ರಿಜರ್ವ್ ಬ್ಯಾಂಕ್ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ