ನವದೆಹಲಿ : ಭಾರತದ ಸಮಗ್ರತೆ, ರಕ್ಷಣೆ ಮತ್ತು ಸಾರ್ವಜನಿಕ ಭದ್ರತೆಗೆ ಧಕ್ಕೆ ಬರುತ್ತಿರುವ ಕಾರಣದಿಂದ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ.
ಟಿಕ್ ಟಾಕ್, ಶೇರ್ ಇಟ್, ಹೆಲೋ, ಯುಸಿ ಬ್ರೌಸರ್ ಸೇರಿದಂತೆ ಹಲವು ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.
ಅಲ್ಲದೇ ಈ ಆ್ಯಪ್ ಗಳು ಭಾರತೀಯರ ಗೌಪ್ಯತೆಯನ್ನು ಕಾಪಾಡುವಲ್ಲಿ ಹಾಗೂ ಡಾಟಾ ಸುರಕ್ಷತೆಯ ವಿಚಾರದಲ್ಲಿ ನಿಯಮ ಉಲ್ಲಂಘಿಸಿದೆ. ಆದಕಾರಣ ಇದು ದೇಶದ ಭದ್ರತೆ ಅಪಾಯವನ್ನುಂಟುಮಾಡುವ ನಿಟ್ಟಿನಲ್ಲಿ ಇವುಗಳನ್ನು ಬ್ಯಾನ್ ಮಾಡಿರುವುದಾಗಿ ತಿಳಿಸಿದೆ.