ಮುಂಬೈ : ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿ ಇದೀಗ ಸಲೂನ್ ಉದ್ಯಮಕ್ಕೂ ಕಾಲಿಡುತ್ತಿದೆ.
ಅದಕ್ಕಾಗಿ ಚೆನ್ನೈ ಮೂಲದ `ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ ಕಂಪನಿಯ ಶೇ.49ರಷ್ಟು ಪಾಲನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ರಿಲಯನ್ಸ್ ಸಲೂನ್ ಉದ್ಯಮಕ್ಕೆ ಕಾಲಿಡುವ ಮೂಲಕ ಹಿಂದೂಸ್ತಾನ್ ಯುನಿಲೀವರ್ನ ಲ್ಯಾಕ್ಮೆ ಬ್ರ್ಯಾಂಡ್, ಎನ್ರಿಚ್ ಮತ್ತು ಗೀತಾಂಜಲಿಯಂಥ ಇತರ ಸ್ಥಳೀಯ ಬ್ರ್ಯಾಂಡ್ಗಳಿಗೂ ಪೈಪೋಟಿ ನೀಡಲಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ಈ ಕುರಿತು ಮಾತನಾಡಿರುವ ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ ಸಿಇಒ ಸಿಕೆ ಕಮಾರವೇಲ್ ಮಾತನಾಡಿ, ದೇಶಾದ್ಯಂತ ಗ್ರೂಮ್ ಇಂಡಿಯಾ ಸಲೂನ್ಸ್ ಅಂಡ್ ಸ್ಪಾ 700 ನ್ಯಾಚುರಲ್ ಸಲೂನ್ಗಳನ್ನು ನಡೆಸುತ್ತಿದೆ. ರಿಲಯನ್ಸ್ ಹೂಡಿಕೆಯಿಂದ ನಮ್ಮ ನೆಟ್ವರ್ಕ್ ಅನ್ನು ಇನ್ನಷ್ಟು ವಿಸ್ತರಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.