ಅಮರಾವತಿ : ಅನೈತಿಕ ಸಂಬಂಧ ಹೊಂದಿದ್ದ ಮಗಳನ್ನು ಹತ್ಯೆ ಮಾಡಿರುವುದಾಗಿ ತಂದೆಯೋರ್ವ ಒಪ್ಪಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಲಿಖಿತಾ ಶ್ರೀ(16) ಮೃತ ಬಾಲಕಿ. ಲಿಖಿತಾಳನ್ನು ಆಕೆಯ ತಂದೆ ವರ ಪ್ರಸಾದ್ ಕೊಲೆ ಮಾಡಿದ್ದಾನೆ. ಈತ ರೆಲ್ಲಿವೀಧಿಯಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.
ವರಪ್ರಸಾದ್ ತನ್ನ ಮಗಳು ಲಿಖಿತಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.