ವ್ಯಾಕ್ಸಿಂಗ್, ಶೇವಿಂಗ್ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಂ ಧಾರ್ಮಿಕ ಗುರು

ಶುಕ್ರವಾರ, 20 ಜುಲೈ 2018 (15:21 IST)
ಮುಜಾಫರ್ ನಗರ : ಅಪರಿಚಿತ ವ್ಯಕ್ತಿಯಿಂದ ಮೇಹಂದಿ ಹಾಕಿಸಿಕೊಳ್ಳುವುದು ಹಾಗೂ ಪುರುಷರಿಂದ ಕೈಗೆ ಬಳೆ ತೊಡಿಸಿಕೊಳ್ಳುವುದೂ ಶರಿಯಾ ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ ಇಸ್ಲಾಂ ಧಾರ್ಮಿಕ ಗುರು ದಾರುಲ್ ಉಲೂಮ್ ಅವರು ಇದೀಗ ವ್ಯಾಕ್ಸಿಂಗ್, ಶೇವಿಂಗ್ ಮಾಡಿಕೊಳ್ಳಬಾರದೆಂದು ಫತ್ವಾ ಹೊರಡಿಸಿದ್ದಾರೆ.


ಸ್ಥಳೀಯರಾದ ಅಬ್ದುಲ್ ಆಜೀಜ್, 'ಗಂಡಸರು ಗಡ್ಡ ಬೋಳಿಸುವುದು ಹಾಗೂ ಮಹಿಳೆಯರು ಕೈ ಕಾಲುಗಳಲ್ಲಿ ರೋಮಗಳನ್ನು ತೆಗೆದುಕೊಳ್ಳುವುದು ಧರ್ಮ ಸಮ್ಮತವೇ?' ಎಂದು ಕೇಳಿದ್ದಕ್ಕೆ ಉತ್ತರಿಸಿದ ಧರ್ಮಗುರು, ಕಂಕುಳು, ಮೀಸೆ ಹಾಗೂ ನಾಭಿಯ ಕೆಳಭಾಗದಲ್ಲಿ ಹೊರತುಪಡಿಸಿ, ದೇಹದ ಬೇರೆ ಭಾಗದಲ್ಲಿರುವ ಕೂದಲನ್ನು ತೆಗೆಯುವುದು ಶರಿಯಾ ಸಂಸ್ಕೃತಿಗೆಗೆ ವಿರುದ್ಧವಾದದ್ದು ಎಂದು ಉತ್ತರಿಸಿದ್ದಾರೆ.


ಹಾಗೇ 'ಈ ಫತ್ವಾ ಸೂಕ್ತವಾಗಿ, ಶರಿಯಾ ಕಾನೂನಿಗೆ ಸರಿಯಾಗಿದೆ. ಆದರೆ, ಇಂಥ ಅಭ್ಯಾಸಗಳನ್ನು ನಿಷೇಧಿಸಿಲ್ಲ,' ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ