ಸರ್ಕಾರಿ ಕಚೇರಿಗಳಲ್ಲಿರುವ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳ ತೆರವು ?

ಗುರುವಾರ, 9 ಫೆಬ್ರವರಿ 2023 (11:38 IST)
ಸಿಡ್ನಿ : ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿರುವ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ನಲ್ಲಿ ಇದೇ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ. ಇವೆರಡೂ ಸರ್ಕಾರಿ ಇಲಾಖೆಗಳು ಸೂಕ್ಷ್ಮ ಕಚೇರಿಗಳಲ್ಲಿ ಚೀನೀ ನಿರ್ಮಿತ ಕ್ಯಾಮೆರಾಗಳನ್ನು ಅಳವಡಿಸುವುದಂತೆ ಕ್ರಮವಹಿಸಲಾಗಿದೆ.

ಚೀನಾದ ಕಂಪನಿಗಳಿಗೆ ಬೀಜಿಂಗ್ನ ಭದ್ರತಾ ವಲಯ ಗುಪ್ತಚರ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸಬಹುದು ಎಂಬ ಭಯದಿಂದ ಕಳೆದ ವರ್ಷದ ನವೆಂಬರ್ನಲ್ಲಿ ಬ್ರಿಟನ್ ಈ ಕಾರ್ಯಾರಂಭ ಮಾಡಿತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ