ಅಕ್ಸರ್ ಪಟೇಲ್ ಟಾರ್ಗೆಟ್ ಮಾಡಿರುವ ಆಸ್ಟ್ರೇಲಿಯಾ
ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಪಿನ್ನರ್ ಅಕ್ಸರ್ ಪಟೇಲ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎದುರಾಳಿಗಳಿಗೆ ಅಚ್ಚರಿಯ ರೀತಿಯಲ್ಲಿ ಅವರು ಮಾರಕವಾಗುತ್ತಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಕ್ಸರ್ ಪಟೇಲ್ ಬೌಲಿಂಗ್ ವಿಡಿಯೋಗಳನ್ನು ನೋಡಿ ಅವರನ್ನು ಎದುರಿಸಲು ವಿಶೇಷವಾಗಿ ರಣತಂತ್ರ ರೂಪಿಸುತ್ತಿದೆ ಎಂಬ ಸುದ್ದಿಯಿದೆ. ಫೆಬ್ರವರಿ 9 ರಿಂದ ಟೆಸ್ಟ್ ಸರಣಿ ಆರಂಭವಾಗುತ್ತಿದೆ.