ತಾಜ್‌ಮಹಲ್‌‌ನ್ನು ತಾಜ್‌ಮಂದಿರ್‌ನೆಂದು ಘೋಷಿಸಿ: ಬಿಜೆಪಿ ಸಂಸದ

ಮಂಗಳವಾರ, 24 ಅಕ್ಟೋಬರ್ 2017 (15:50 IST)
ತಾಜ್ಮಹಲ್ ವಿರುದ್ಧದ ವಿವಾದ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇದೀಗ ಬಿಜೆಪಿ ನಾಯಕ ವಿನಯ್ ಕಟಿಯಾರ್ ಆಗ್ರಾದಲ್ಲಿರುವ ಐತಿಹಾಸಿಕ ಸ್ಮಾರಕವಾದ ತಾಜ್ ಮಹಲ್‌ನ್ನು ತಾಜ್‌ಮಂದಿರ್ ಎಂದು ಮರುನಾಮಕರಣಗೊಳಿಸುವಂತೆ ಅಧಿಕಾರಿಗಳಿಗೆ ಕೋರಿದ್ದಾರೆ.  
ತಾಜ್‌ಮಹಲ್ ಮೊದಲು ಶಿವನ ದೇವಾಲಯವಾಗಿದ್ದರಿಂದ ತಾಜ್‌ಮಂದಿರ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ಫೈರ್‌ಬ್ರ್ಯಾಂಡ್‌ ಸಂಸದ ತಿಳಿಸಿದ್ದಾರೆ.
 
ತಾಜ್‌ಮಹಲ್ ಆವರಣದೊಳಗೆ 'ಶಿವ ಚಾಲಿಸಾ' ವನ್ನು ಸೋಮವಾರ ಓದಿದ ಹಿನ್ನೆಲೆಯಲ್ಲಿ ಹಿಂದು ಯುವ ವಾಹಿನಿ ಸಂಘಟನೆಗೆ ಸೇರಿದ ಕೆಲವು ಕಾರ್ಯಕರ್ತರನ್ನು ಬಂಧಿಸಿದ ನಂತರ ಕಟಿಯಾರ್ ಹೇಳಿಕೆ ಹೊರಬಿದ್ದಿದೆ.
 
ಈ ಘಟನೆ ತಾಜ್‌ಮಹಲ್ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತ್ತು. ಕಾರ್ಯಕರ್ತರನ್ನು ಸ್ಥಳೀಯ ಪೊಲೀಸರು ಔಪಚಾರಿಕವಾಗಿ ಬಂಧಿಸಿ, ಲಿಖಿತ ಕ್ಷಮಾಪಣೆಯನ್ನು ಸಲ್ಲಿಸಿದ ನಂತರ ಮಾತ್ರ ಅವರನ್ನು ಬಿಡುಗಡೆ ಮಾಡಲಾಯಿತು.
 
ಮೊಘಲ್ ಭವ್ಯ ಸಮಾಧಿಯು ಹಿಂದೂ ದೇವಸ್ಥಾನವಾಗಿದೆ. ತಾಜ್‌ಮಹಲ್‌ನ್ನು ತೇಜೋ ಮಹಲ್ ಎಂದು ಕರೆಯಲಾಗುತ್ತಿತ್ತು. ಅದರಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ನಂತರ ಶಿವನ ಮೂರ್ತಿಯನ್ನು ತೆಗೆದು ತಾಜ್‌ಮಹಲ್ ಎಂದು ಹೆಸರಿಸಲಾಗಿತ್ತು ಎಂದು ತಿಳಿಸಿದ್ದಾರೆ. 
 
ಷಹಜಹಾನ್ ತನ್ನ ಹೆಂಡತಿಯನ್ನು ತೇಜೋ ಮಹಲ್‌ನಲ್ಲಿ ಅಂತ್ಯಸಂಸ್ಕಾರ ಮಾಡಿ ಸಮಾಧಿಯಾಗಿ ಮಾರ್ಪಡಿಸಿದ. ತೇಜೋ ಮಹಲ್, ಭಗವಾನ್ ಶಿವನ ದೇವಸ್ಥಾನ ಎಂದು ಅಯೋಧ್ಯೆಯ ರಾಮ ಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ