ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್ ಶೋಗೆ ನಿರ್ಬಂಧ!

ಭಾನುವಾರ, 23 ಜನವರಿ 2022 (06:46 IST)
ನವದೆಹಲಿ : ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಕೊಂಡಿವೆ.
 
ಈ ನಡುವೆ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ಪಕ್ಷಗಳು ಭೌತಿಕವಾಗಿ ರೋಡ್ ಶೋ, ಸಭೆ-ಸಮಾರಂಭ, ರ್ಯಾಲಿಗಳನ್ನು ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.

ಕೇಂದ್ರ ಚುನಾವನಾ ಆಯೋಗದ ಮುಖ್ಯಸ್ಥರು, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಪಂಚರಾಜ್ಯಗಳ ಚುನಾವಣಾ ಮುಖ್ಯಧಿಕಾರಿಗಳೊಂದಿಗೆ ನಡೆದ ವರ್ಚುವಲ್ ಸಭೆಯ ಬಳಿಕ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಮುಖ್ಯ ಆಯುಕ್ತ ಸುಶೀಲ್ ಕುಮಾರ್ ದೇಶದಲ್ಲಿ ಕೊರೊನಾ ಮೂರನೇ ಅಲೆ ಇರುವುದರಿಂದಾಗಿ ಮುಂದಿನ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭ ಜನ ಸೇರಿಸಿಕೊಂಡು ರ್ಯಾಲಿ, ಸಭೆ, ರೋಡ್ ಶೋ ಮಾಡಲು ಅವಕಾಶ ನಿರಾಕರಿಸಲಾಗಿದೆ. ಆದರೆ ಈ ನಡುವೆ ನಿಗದಿತ ಜನಸಂಖ್ಯೆಯನ್ನು ಸೇರಿಸಿಕೊಂಡು ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದರು. 

ಚುನಾವಣಾ ಆಯೋಗ ಜನವರಿ 15 ರಂದು ಈ ಅವಧಿಯನ್ನು ಜನವರಿ 22 ರವರೆಗೆ ವಿಸ್ತರಿಸಿತು. ಇದೀಗ ಈ ಅವಧಿಯನ್ನು ಮತ್ತೆ ಜನವರಿ 31ರ ವರೆಗೆ ವಿಸ್ತರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ