ದುರಹಂಕಾರಿಗೆ ತಕ್ಕ ಶಾಸ್ತಿಯಾಗಿದೆ, ಸರ್ವಾಧಿಕಾರಿ ನಗ್ನನಾಗಿದ್ದಾನೆ: ಮೋದಿಗೆ ಪ್ರಕಾಶ್ ರಾಜ್ ಟಾಂಗ್
ಮೋದಿಯನ್ನು ಸರ್ವಾಧಿಕಾರಿ ಎನ್ನುತ್ತಲೇ ಬಂದಿರುವ ಪ್ರಕಾಶ್ ರಾಜ್ ಈಗ ಬಿಜೆಪಿಗೆ ಬಹುಮತ ಬರದ ಹಿನ್ನಲೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ದುರಹಂಕಾರಿಗೆ ತಕ್ಕ ಶಾಸ್ತಿಯಾಗಿದೆ. ಸರ್ವಾಧಿಕಾರಿ ನಗ್ನನಾಗಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.
ಸರ್ವಾಧಿಕಾರಿ ನಗ್ನನಾಗಿದ್ದಾನೆ. ಇದೀಗ ಬೇರೆಯವರ ಬೆಂಬಲದೊಂದಿಗೆ ನಡೆದಾಡುವ ಪರಿಸ್ತಿತಿ ಬಂದಿದೆ. ಇಂತಹ ವ್ಹಕ್ತಿಯ ದುರಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿ ಆತನ ನಿಜವಾದ ಸ್ಥಾನ ಎಲ್ಲಿ ಎಂದು ತೋರಿಸಿದ್ದಕ್ಕೆ ಇಂಡಿಯಾ ಒಕ್ಕೂಟ ಮತ್ತು ನಾಗರಿಕ ಸಮಾಜಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಹೋರಾಡಿದೆವು. ಅದನ್ನು ಮುಂದೆಯೂ ಮುಂದುವರಿಸಲಿದ್ದೇವೆ ಎಂದಿದ್ದಾರೆ.
ಅಲ್ಲದೆ, ಮೋದಿ ಜನತೆಗೆ ಧನ್ಯವಾದ ಸಲ್ಲಿಸಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್ ಆದ್ರೂ ನಿಮ್ಮ ಅಯೋಧ್ಯೆಯಲ್ಲೇ ನಿಮಗೆ ಪ್ರಭು ಶ್ರೀರಾಮ ನಿಮಗೆ ಆಶೀರ್ವಾದ ಮಾಡಲಿಲ್ಲವಲ್ಲ; ಎಂದು ಕಾಲೆಳೆದಿದ್ದಾರೆ.