ಮುಖ್ಯಮಂತ್ರಿ ಆಸನದ ಮೇಲೆ ಲಾಲು ಪ್ರಸಾದ್

ಸೋಮವಾರ, 13 ಫೆಬ್ರವರಿ 2017 (12:37 IST)
ಹಿರಿಯ ರಾಜಕಾರಣಿ, ಆರ್‌ಜೆ‌ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇತ್ತೀಚಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕುರ್ಚಿಯ ಮೇಲೆ ಕುಳಿತಿದ್ದು ವ್ಯಾಪಕ ಚರ್ಚೆಗೆ ಗುರಿಯಾಗಿದೆ. 

ರಾಷ್ಟ್ರೀಯ ಸುದ್ದಿವಾಹಿನಿಯೊಂದು ಪ್ರಕಟಿಸಿರುವ ವರದಿಯ ಪ್ರಕಾರ ಇತ್ತೀಚಿಗೆ ಪಾಟ್ಣಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಆಹ್ವಾನಿಸಲಾಗಿತ್ತು. ಸ್ಥಳಕ್ಕೆ ತಲುಪಿದ ರಾಜ್ಯದ ಮುಖ್ಯಮಂತ್ರಿ ನಿತೀಶ್ ಅವರಿಗೆ ಮೀಸಲಾಗಿಟ್ಟಿದ್ದ ಸೀಟಿನಲ್ಲಿ ಆಸೀನರಾಗಿದ್ದಾರೆ.
 
ಕಾರ್ಯಕ್ರಮದ ಆಯೋಜಕರು ಸವಿನಯವಾಗಿ ಈ ಕುರಿತು ಮನವರಿಕೆ ಮಾಡಿಸಿದಾಗಲೇ ಲಾಲು ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದು. ಯಾವುದೇ ಬಲವಂತವಿಲ್ಲದೆ ತಕ್ಷಣ ಅವರು ಆ ಕುರ್ಚಿಯಿಂದ ಎದ್ದು ತಮಗಾಗಿ ಮೀಸಲಾಗಿಟ್ಟಿದ್ದ ಆಸದನದ ಮೇಲೆ ಹೋಗಿ ಕುಳಿತಿದ್ದಾರೆ.
 
ಕೆಲ ದಿನಗಳ ಹಿಂದಷ್ಟೇ ಸಿಖ್ ಗುರು ಗೋವಿಂದ ಸಿಂಗರ 350ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಆಸನ ಕಲ್ಪಿಸಲಾಗಿದ್ದು ತನಗೆ ಆ ಸಾಲಿನಲ್ಲಿ ಆಸನ ಕಲ್ಪಿಸಲಾಗಿರಲಿಲ್ಲ ಎಂಬ ಕಾರಣಕ್ಕೆಆರ್‌ಜೆಡಿ ಗರಂ ಆಗಿತ್ತು.
 
ಬಳಿಕ ಆಯೋಜಕರು ಲಾಲು ಅವರಿಗೆ ಅಪಮಾನವನ್ನುಂಟು ಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ ಮೇಲೆ ಲಾಲು ಕೋಪ ತಣ್ಣಗಾಗಿತ್ತು. 

ವೆಬ್ದುನಿಯಾವನ್ನು ಓದಿ